ಪೊಲೀಸ್ ಅಧಿಕಾರಿ ಅಮಾನುಲ್ಲಾ |
ಹಾಶಿರ್ ಪೇರಿಮಾರ್
ಮಾಜಿ ಉಪಾಧ್ಯಕ್ಷ & ಹಾಲಿ ಸದಸ್ಯರು, ಪುದು ಗ್ರಾಮ ಪಂಚಾಯತ್
ಕರಾವಳಿ ಟೈಮ್ಸ್
ಕೋವಿಡ್-19 ವೈರಸ್ ಹಾವಳಿಯಿಂದ ಪಾರಾಗಲು ದೇಶಾದ್ಯಂತ ವಿಧಿಸಲಾಗಿರುವ ಲಾಕ್‍ಡೌನ್ ಪರಿಣಾಮ ಜನರೆಲ್ಲ ಮನೆಯೊಳಗೆ ಅಡಗಿ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭ ಜನರಿಗಾಗಿ, ಜನರ ರಕ್ಷಣೆಗಾಗಿ ಆಹೋ-ರಾತ್ರಿ ಬೀದಿಯಲ್ಲಿ ಓಡಾಡುತ್ತಾ ಕಾರ್ಯನಿರ್ವಹಿಸುತ್ತಿರುವ ಕೆಲವೇ ವರ್ಗಗಳ ಪೈಕಿ ಪೊಲೀಸರು ಪ್ರಮುಖ ವರ್ಗ. ತಮ್ಮ ಬಿಡುವಿಲ್ಲದ ಕೆಲಸ-ಕಾರ್ಯದ ನಡುವೆ ಪೊಲೀಸರು ತಮಗೂ ಹೆಂಡತಿ-ಮಕ್ಕಳು, ತಂದೆ-ತಾಯಿ, ಕುಟುಂಬ ಇದೆ ಎಂಬುದನ್ನು ದೇಶದ ಜನರಿಗಾಗಿ ಹಲವು ವಿಧ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ಕೈಯಲ್ಲಾಗುವ ರೀತಿಯಲ್ಲಿ ಬಡ ಜನರ ಸೇವೆಗಳನ್ನೂ ಮಾಡುತ್ತಿದ್ದಾರೆ. ಜನರ ಅಗತ್ಯ ಸೇವೆಗಳಾಗಿರುವ ಊಟೋಪಚಾರ, ಅನ್ನ-ಪಾನೀಯಾದಿಗಳು, ಔಷಧೋಪಚಾರ ಮೊದಲಾದ ಜನರ ಅಗತ್ಯಗಳಿಗೂ ಪೊಲೀಸ್ ಅಧಿಕಾರಿಗಳು ಸ್ಪಂದಿಸುತ್ತಿರುವುದು ನೋಡುವಾಗ ನಿಜಕ್ಕೂ ಇವರೇ ಈ ದೇಶದ ನಿಜವಾದ ಹೀರೋಗಳು ಎಂಬುದು ಮನವರಿಕೆಯಾಗುತ್ತಿದೆ.
ಈ ಮಧ್ಯೆ ಮಂಗಳೂರು ನಗರದ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿರುವ *_ಮಿಸ್ಟರ್ ಅಮಾನುಲ್ಲಾ ಸರ್_* ಅವರಂತೂ ತೆರೆಮರೆಯ ಕಾಯಿಯಾಗಿದ್ದುಕೊಂಡು ಜನರ ಸೇವೆಗೈಯುತ್ತಿರುವು ಬಹಳಷ್ಟು ಮಂದಿಯ ಗಮನಕ್ಕೆ ಬಂದಿರಲಿಕ್ಕಿಲ್ಲ. ಕಾರಣ ಅವರ ಸೇವೆಗಳೆಲ್ಲವೂ ಅತ್ಯಂತ ರಹಸ್ಯವಾಗಿರುತ್ತದೆ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ಕೂಡಾ ಅಮಾನುಲ್ಲಾ ಸರ್ ಅವರು ಬಡ ಕುಟುಂಬಗಳ ಹಸಿವಿನ ನೋವಿಗೆ ಸ್ಪಂದಿಸುತ್ತಿದ್ದಾರೆ. ನೊಂದವರ ಕಣ್ಣೀರೊರೆಸಲು ತನ್ನಿಂದಾದ ಮಟ್ಟಿನ ಸಹಾಯ-ಸಹಕಾರ ನೀಡುವ ಮೂಲಕ ಪೊಲೀಸರೊಳಗಿನ ಮಾನವೀಯ ಮುಖವನ್ನು ಅನಾವರಣಗೊಳಿಸುತ್ತಿದ್ದಾರೆ. ಇವರ ಸೇವೆಗೆ ಸರ್ವಶಕ್ತನಾದ ಭಗವಂತನು ತಕ್ಕುದಾದ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ.... ಇನ್ನಷ್ಟು ಬಡವರ ಸೇವೆಗೈಯಲು ಆಯುರಾರೋಗ್ಯ, ಸೌಭಾಗ್ಯವನ್ನು ಕರುಣಿಸಲಿ.... ಎಂದು ಸದಾ ಪ್ರಾರ್ಥಿಸಬೇಕಾಗಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಸದಾ ಶ್ರಮಪಡುತ್ತಿರುವ ಖಾಕಿಗಳಿಗೆ ನಮ್ಮೆಲ್ಲರ ಪ್ರಾರ್ಥನೆ ಸದಾ ಇರಲಿ......
0 comments:
Post a Comment