ಕೋವಿಡ್-19 ಹೆಲ್ಪಿಂಗ್ ಟೀಂ ಪಾಣೆಮಂಗಳೂರು, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಹಾಗೂ ಕೋವಿಡ್-19 ಹೆಲ್ಪಿಂಗ್ ಟೀಂ ಬೋಗೋಡಿ ಸಾಥ್
ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಹೆಲ್ಪಿಂಗ್ ಟೀಂ ಪಾಣೆಮಂಗಳೂರು, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಹಾಗೂ ಕೋವಿಡ್-19 ಹೆಲ್ಪಿಂಗ್ ಟೀಂ ಬೋಗೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಲಡ್ಕ ಹಾಗೂ ಬೋಗೋಡಿ ಪರಿಸರದ ಎಲ್ಲಾ ಮನೆಗಳಿಗೆ ಲಾಕ್‍ಡೌನ್ ಸಂಧಿಗ್ಧತೆ ಎದುರಿಸಲು ರೇಶನ್ ಕಿಟ್‍ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಊರಿನ ಸರ್ವ ದಾನಿಗಳ ಹಾಗೂ ಸಾರ್ವಜನಿಕರ ಮತ್ತು ಅನಿವಾಸಿ ಮಿತ್ರರುಗಳ ಸಂಪೂರ್ಣ ಸಹಕಾರದೊಂದಿಗೆ ಮೂರು ಮೊಹಲ್ಲಾಗಳ ವ್ಯಾಪ್ತಿಗೊಳಪಟ್ಟ ಆಲಡ್ಕ, ಉಪ್ಪುಗುಡ್ಡೆ, ಬಂಗ್ಲೆಗಡ್ಡೆ, ಪಡ್ಪು, ಬೋಗೋಡಿ, ಗುಡ್ಡೆಅಂಗಡಿ, ತ್ಯಾಗರಾಜ ರಸ್ತೆ, ಬಾಳ್ತಿಲ, ಮರ್ದೋಳಿ ಮೊದಲಾದ ಪರಿಸರಗಳ ವಿವಿಧ ಜಾತಿ-ಧರ್ಮಗಳಿಗೆ ಸೇರಿದ ಸುಮಾರು 650 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಈ ವ್ಯವಸ್ಥೆಯ ಫಲ ದೊರೆತಿದೆ.
ಬೇರೆ-ಬೇರೆ ವೇದಿಕೆಗಳ ಮೂಲಕ ಕಿಟ್ ಹಂಚಿಕೆಯಾದರೆ ಅವ್ಯವಸ್ಥೆ ಆದೀತು ಎಂಬುದನ್ನು ಮನಗಂಡ ಊರಿನ ಎಲ್ಲಾ ಪ್ರಮುಖ ಸಂಘಟನೆಗಳು, ದಾನಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ಒಂದೇ ವೇದಿಕೆಯಡಿ ವ್ಯವಸ್ಥೆ ಕಲ್ಪಿಸಿದರೆ ಫಲಪ್ರದವಾಗಬಹುದು ಎಂಬ ಚಿಂತನೆಯಿಂದ ಈ ಕೋವಿಡ್-19 ಹೆಲ್ಪಿಂಗ್ ಟೀಂ ಎಂಬ ಒಂದೇ ವೇದಿಕೆಯನ್ನು ನಿರ್ಮಿಸಿ ಊರಿನ ಹಾಗೂ ಆಸುಪಾಸಿನ ಪರಿಸರದ ಸಮಗ್ರ ನಾಗರಿಕರಿಗೆ ಇದರ ಫಲ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಊರಿನ ಸರ್ವ ನಾಗರಿಕರು ಈ ಹೆಲ್ಪಿಂಗ್ ಟೀಂ ಸೇವಾ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪೂರ್ಣ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಈ ತಂಡದ ಸಾಮಾಜಿಕ ಸೇವಾ ಚಟುವಟಿಕೆಗಳು ನಾಗರಿಕ ಸಮಾಜಕ್ಕಾಗಿ ಸದಾ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
0 comments:
Post a Comment