ಪ್ರಧಾನಿಗಳೇ ಮೌಡ್ಯಕ್ಕೆ ಬಲಿ ಬೀಳಬೇಡಿ ಪ್ರಜೆಗಳ ಅಗತ್ಯಾನುಸಾರ ಕಾರ್ಯನಿರ್ವಹಿಸಿ : ಅಬೂಬಕ್ಕರ್ ಸಜಿಪ - Karavali Times ಪ್ರಧಾನಿಗಳೇ ಮೌಡ್ಯಕ್ಕೆ ಬಲಿ ಬೀಳಬೇಡಿ ಪ್ರಜೆಗಳ ಅಗತ್ಯಾನುಸಾರ ಕಾರ್ಯನಿರ್ವಹಿಸಿ : ಅಬೂಬಕ್ಕರ್ ಸಜಿಪ - Karavali Times

728x90

5 April 2020

ಪ್ರಧಾನಿಗಳೇ ಮೌಡ್ಯಕ್ಕೆ ಬಲಿ ಬೀಳಬೇಡಿ ಪ್ರಜೆಗಳ ಅಗತ್ಯಾನುಸಾರ ಕಾರ್ಯನಿರ್ವಹಿಸಿ : ಅಬೂಬಕ್ಕರ್ ಸಜಿಪ



ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಕೊರೋನಾ ಎಂಬ ಮಹಾಮಾರಿಯಾಗಿರುವ ಸಾಂಕ್ರಾಮಿಕ ರೋಗದಿಂದ ಹಾಗೂ ಲಾಕ್‍ಡೌನ್‍ನಿಂದಾಗಿ ದೇಶದ ಜನತೆಯು ತತ್ತರಿಸಿರುವಂತಹ ಈ ಸಂಧಿಗ್ದ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿಯಾಗಿ ದೇಶವಾಸಿಗಳ ಹಿತವನ್ನು ಕಾಪಾಡಬೇಕಾದ ಸಂಧರ್ಭ ಮೌಡ್ಯಕ್ಕೆ ಬಲಿಬಿದ್ದು ಚಪ್ಪಾಳೆ ತಟ್ಟುವ ಹಾಗೂ ಮೊಂಬತ್ತಿ ಉರಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಕಿಡಿಕಾರಿದ್ದಾರೆ.

ಪ್ರಧಾನಿಯವರ ಇಂತಹ ತಲೆಬುಡವಿಲ್ಲದ ಕ್ರಮದಿಂದ ಜನಸಾಮಾನ್ಯರ ಹಸಿವು ನೀಗುವುದಿಲ್ಲ. ಪ್ರಧಾನಿಯಾದ ತಾವು ಜವಾಬ್ದಾರಿಯನ್ನು ಅರಿತು ಬಡ ಬಗ್ಗರು ಕೆಲಸವಿಲ್ಲದೇ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸಂಧರ್ಭದಲ್ಲಿ ಬರೀ ಅಕ್ಕಿಯನ್ನು ಮಾತ್ರ ನೀಡಿದರೆ ಸಾಕಾಗುವುದಿಲ್ಲ. ಇನ್ನಿತರ ಅಗತ್ಯ ವಸ್ತುಗಳನ್ನೂ ಪೂರೈಸುವ ಮುಖಾಂತರ ಜವಾಬ್ದಾರಿಯನ್ನು ಮೆರೆಯಬೇಕಿತ್ತು. ಇಂದು ದೇಶದ ಎಲ್ಲಾ ಮನೆಗಳಲ್ಲಿ ಒಂದಲ್ಲ ಒಂದು ರೀತಿಯ ರೋಗಿಗಳು ಇದ್ದಾರೆ, ಕೆಲವೊಂದು ಕುಟುಂಬಗಳು ದಿನನಿತ್ಯದ ಅವಶ್ಯಕ ಔಷದಿಯಿಲ್ಲದೇ ಕೈಯ್ಯಲ್ಲಿ ಬಿಡಿಗಾಸೂ ಇಲ್ಲದೇ ಪರಡಾಡುತ್ತಿರುವಂತಹ ಸ್ಥಿತಿ ಇದೆ. ಅಂತಹ ಕುಟುಂಬಗಳಿಗೆ  ಕೇರಳ ಸರಕಾರ ನೀಡುತ್ತಿರುವಂತೆ ಔಷದಿ ಹಾಗೂ ದಿನಬಳಕೆಯ ಸಾಮಾಗ್ರಿಗಳನ್ನು ಪೂರೈಸುವ ಮುಖಾಂತರ ದೇಶವಾಸಿಗಳ ಹಿತವನ್ನು ಕಾಪಾಡುವುದು ಬಿಟ್ಟು ಚಪ್ಪಾಳೆ, ಬಟ್ಟಲು ತಟ್ಟುವುದು, ಮೊಂಬತ್ತಿ ಉರಿಸುವಂತಹ ಅವೈಜ್ಞಾನಿಕ ಹಾಗೂ ಮೌಡ್ಯದಿಂದ ಕೂಡಿದ ಕ್ರಮಗಳನ್ನು ಬಲವವಂತವಾಗಿ ಜಾರಿಗೊಳಿಸುವ ಮೂಲಕ ಜನರ ತಾಳ್ಮೆಯನ್ನು ಪರೀಕ್ಷಿಸುವುದು ನಿಜಕ್ಕೂ ಸರಿಯಲ್ಲ ಎಂದು ಅಬೂಬಕ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪ್ರಧಾನಿಗಳೇ ಮೌಡ್ಯಕ್ಕೆ ಬಲಿ ಬೀಳಬೇಡಿ ಪ್ರಜೆಗಳ ಅಗತ್ಯಾನುಸಾರ ಕಾರ್ಯನಿರ್ವಹಿಸಿ : ಅಬೂಬಕ್ಕರ್ ಸಜಿಪ Rating: 5 Reviewed By: karavali Times
Scroll to Top