ಮಂಗಳೂರು (ಕರಾವಳಿ ಟೈಮ್ಸ್) : ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ 2019-20ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮೇ 5 ರಂದು ಪೂರ್ವಾಹ್ನ 9 ಗಂಟೆಗೆ ಸುವಿದ್ಯಾ ವೆಬ್‍ಸೈಟ್ ಮುಖಾಂತರ ಪ್ರಕಟಿಸಲಾಗುವುದು ಹಾಗೂ ಫಲಿತಾಂಶವನ್ನು ಈಗಾಗಲೇ ಸುವಿದ್ಯಾ ತಂತ್ರಾಂಶದಲ್ಲಿ ನಮೂದಿತವಾಗಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗಳಿಗೆ (ರಿಜಿಸ್ಟರ್ಡ್ ಸ್ಟುಡೆಂಟ್ ಮೊಬೈಲ್ ನಂಬರ್ಗಳಿಗೆ) ಎಸ್.ಎಂ.ಎಸ್. ಸಂದೇಶದ ಮುಖಾಂತರ ಅದೇ ದಿನ ರವಾನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಪ್ರಕಟಣೆ ತಿಳಿಸಿದೆ.
ಅಂತರ್ಜಾಲ ಸೌಲಭ್ಯವಿರುವ ಎಲ್ಲ ಮೊಬೈಲ್ ಫೋನ್‍ಗಳು/ ಕಂಪ್ಯೂಟರ್‍ಗಳಲ್ಲಿ https://result.dkpucpa.com ಫಲಿತಾಂಶದ ಲಿಂಕ್‍ಗೆ ಹೋಗಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶವನ್ನು ಪಡೆಯಬಹುದು ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮುದ್ರಿಸಿಕೊಳ್ಳಬಹುದು.
ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿಯೇ ಪೂರಕ ಪರೀಕ್ಷೆ ನಡೆಸುವ ಬಗ್ಗೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ತಿಳಿಸಲಾಗುವುದು ಎಂದಿರುವ ಪ್ರಾಂಶುಪಾಲರ ಎಸೋಸಿಯೇಶನ್ ಪ್ರಕಟಣೆ ವಿಧ್ಯಾರ್ಥಿಗಳು ಫಲಿತಾಂಶ ಪರಿಶೀಲನೆಗಾಗಿ ಕಾಲೇಜಿಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಕಾಲೇಜಿನ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು ಸೂಚಿಸಿದೆ.
0 comments:
Post a Comment