ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪ 10ನೇ ತರಗತಿ ಮುಗಿಸಿ ಮನೆಯಲ್ಲಿಯೇ ಇರುವ ಅಪ್ರಾಪ್ತ ಮಗಳ ಮೇಲೆ ತಂದೆಯೇ ನಿರಂತರವಾಗಿ ಮೂರು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆರೋಪಿ ತಂದೆಯನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಸಂತ್ರಸ್ತೆ ಬಾಲಕಿ 7ನೇ ತರಗತಿ ಹಾಗೂ 9ನೇ ತರಗತಿಯಲ್ಲಿರುವ ವೇಳೆ ಆರೋಪಿ ತಂದೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾನೆ. ಕಳೆದ ಫೆ 16 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮತ್ತೆ ಲೈಂಗಿಕವಾಗಿ ಪೀಡಿಸಿದ್ದು, ಈ ಎಲ್ಲಾ ಘಟನೆಗಳಿಂದ ನೊಂದ ಬಾಲಕಿ ಫೆ 24 ರಂದು ತನ್ನ ಕೈಯನ್ನು ತಾನೇ ಕೊಯ್ದುಕೊಂಡಿರುತ್ತಾಳೆ. ಬಳಿಕ ನಿಶ್ಶಕ್ತಿಯಿಂದಿದ್ದ ಬಾಲಕಿಯನ್ನು ಮಾ 17 ರಂದು ಆಕೆಯ ತಾಯಿ ಆಸ್ಪತ್ರೆಗೆ ದಾಖಲು ಮಾಡಿದಾಗ ಬಾಲಕಿ ವಿಷಯವನ್ನು ಬಾಯಿ ಬಿಟ್ಟಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಕಲಂ 376, 506, ಐಪಿಸಿ ಮತ್ತು 4,6 ಪೋಕ್ಸೋ ಕಾಯ್ದೆ 2012 ರಂತೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾದ ಬಂಟ್ವಾಳ ಸಿಐ ಟಿ ಡಿ ನಾಗರಾಜ್ ಹಾಗೂ ವಿಟ್ಲ ಎಸ್ಸೈ ವಿನೋದ್ ರೆಡ್ಡಿ ಅವರು ಆರೋಪಿ ತಂದೆಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
0 comments:
Post a Comment