ವಿಟ್ಲ (ಕರಾವಳಿ ಟೈಮ್ಸ್) : ಕೊರೋನ ವೈರಸ್‍ನಲ್ಲೂ ಕೋಮು ಪ್ರಚೋದಕ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ವಿಕೃತ ಆನಂದ ಅನುಭವಿಸಿದ ಆರೋಪಿ ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜಯಕರ ಆಚಾರ್ಯ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
“ಅಲ್ಲಾಹನ ದುಬೈಯಿಂದ ಬಂದವರಿಂದ ಪವಿತ್ರ ಭಾರತದ ನೆಲದಲ್ಲಿ ಕೊರೋನ ವೈರಸ್ ಹರಡುತ್ತಿದೆ. ದುಬೈಯಿಂದ ಕೇರಳಕ್ಕೆ ಬಂದಿರುವ ಎಲ್ಲಾ ಹರಾಮಿ ಮುಲ್ಲಾಗಳಿಗೂ ಕೊರೋನ ವೈರಸ್ ಪಾಸಿಟಿವ್. ಹಿಂದೂಗಳೇ ಯೋಚಿಸಿ, ಪವಿತ್ರ ಭಾರತಕ್ಕೆ ಕಂಟಕ ಎಲ್ಲಿಂದ ಶುರುವಾಗುವುದು ಎಂದು. ಏಸು, ಅಲ್ಲಾಹ್ ಇವರಿಂದಲೇ ಭಾರತಕ್ಕೆ ಕಂಟಕ. ಇವರ ಬೇರು ಭಾರತದಲ್ಲಿ ಕಿತ್ತು ಬಿಸಾಕಬೇಕಿದೆ” ಎಂದು ಜಯಕರ ಆಚಾರ್ಯ ತಮ್ಮ ಸಾಮಾಜಿಕ ತಾಣದ ಗೋಡೆಯಲ್ಲಿ ಬರೆದುಕೊಂಡಿದ್ದ.
ಈತನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿಟ್ಲ ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳು ವಿಟ್ಲ ಪೊಲೀಸರಿಗೆ ಈತನ ಸಾಮಾಜಿಕ ಜಾಲತಾಣದ ಬರಹದ ಸಕ್ರೀನ್ ಶಾಟ್ ತೆಗದು ದೂರು ನೀಡಿದ್ದರು. ದೂರಿನಂತೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನೊಂದಿಗೆ ಈತನ ಪೋಸ್ಟಿಗೆ ಪ್ರತಿಕ್ರಯಿಸಿದ ಆರೋಪದಲ್ಲಿ ವಿಟ್ಲ-ಮೇಗಿನಪೇಟೆ ಶಾಲಾ ಬಳಿಯ ನಿವಾಸಿ, ಮಂಗಳೂರು ಎಲ್ ಐ ಸಿ ಉದ್ಯೋಗಿ ರೋಹಿತ್ ಸಹಿತ ಮೂವರನ್ನು ಠಾಣೆಗೆ ಕರೆಸಿದ ಪೊಲೀಸರು ಮುಚ್ಚಳಿಕೆ ಬರೆಸಿ ಕಳಿಸಿದ್ದಾರೆ.
0 comments:
Post a Comment