ಮಕ್ಕಾ (ಕರಾವಳಿ ಟೈಮ್ಸ್) : ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ತನ್ನ ಕಬಂಧ ಬಾಹು ವಿಸ್ತರಿಸಿದ ಹಿನ್ನಲೆಯಲ್ಲಿ ರೋಗ ಹರಡುವ ಭೀತಿ ವ್ಯಕ್ತಪಡಿಸಿರುವ ಸೌದಿ ಸರಕಾರ ಸದ್ಯದ ಮಟ್ಟಿಗೆ ಉಮ್ರಾ ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಬಹುಶಃ ಇದು ಮಕ್ಕಾ ಇತಿಹಾಸದಲ್ಲೇ ಅಪರೂಪದ ನಿರ್ಧಾರವಾಗಿದ್ದು, ಉಮ್ರಾ ಸ್ಥಗಿತಗೊಂಡ ಪರಿಣಾಮ ಪವಿತ್ರ ಉಮ್ರಾ ಯಾತ್ರೆಗೆ ತಯಾರಾಗಿದ್ದವರು ನಿರಾಸೆ ಅನುಭವಿಸುವಂತಾಗಿದೆ. ಸೌದಿ ಸರಕಾರದ ಈ ನಿರ್ಧಾರ ಮುಂದಿನ ಹಜ್ ಯಾತ್ರೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉಮ್ರಾ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಸೌದಿ ಅಧಿಕೃತ ಸುದ್ದಿ ಸಂಸ್ಥೆ ಪ್ರೆಸ್ ಏಜೆನ್ಸಿ ವರದಿ ಮಾಡಿದ್ದು, ವಾರ್ಷಿಕ ಲಕ್ಷಾಂತರ ಮಂದಿ ಭಾಗವಹಿಸುವ ಮೂಲಕ ನಡೆಯುವ ಉಮ್ರಾ ಕರ್ಮ ಇದೀಗ ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ. ಸದಾ ಜನ ಜಂಗುಳಿಯಿಂದ ಗಿಜಿಗಿಡುತ್ತಿದ್ದ ಪವಿತ್ರ ಮಕ್ಕಾ ಪ್ರದೇಶ ಇದೀಗ ಜನರ ವಿರಳತೆಯಿಂದ ಬಿಕೋ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
0 comments:
Post a Comment