ಮಂಗಳೂರು (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ದಬೆಟ್ಟು ಎಂಬಲ್ಲಿ ಬುಧವಾರ ಅಟೋ ರಿಕ್ಷಾ ಪಲ್ಟಿಯಾಗಿ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಬದ್ರಿಯಾನಗರ ನಿವಾಸಿ ಸಿದ್ದೀಕ್ ಅವರಿಗೆ ಸೇರಿದ ರಿಕ್ಷಾ ಇದಾಗಿದೆಯೆಂದು ತಿಳಿದು ಬಂದಿದ್ದು, ಗಾಯಾಳು ಮಹಿಳೆಯರೂ ಕೂಡಾ ಅದೇ ಪರಿಸರದವರು ಎನ್ನಲಾಗಿದೆ. ತಕ್ಷಣ ಜಮಾಯಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment