ಭಾನುವಾರವೂ ಸಂಪೂರ್ಣ ಬಂದ್ : ಜಿಲ್ಲೆಯ ಜನರಿಗೆ ಎಸ್ಪಿ ಸೂಚನೆ - Karavali Times ಭಾನುವಾರವೂ ಸಂಪೂರ್ಣ ಬಂದ್ : ಜಿಲ್ಲೆಯ ಜನರಿಗೆ ಎಸ್ಪಿ ಸೂಚನೆ - Karavali Times

728x90

28 March 2020

ಭಾನುವಾರವೂ ಸಂಪೂರ್ಣ ಬಂದ್ : ಜಿಲ್ಲೆಯ ಜನರಿಗೆ ಎಸ್ಪಿ ಸೂಚನೆ



ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್  29  ರಂದು ಕೂಡಾ ಜಿಲ್ಲೆಯಾದ್ಯಂತ ಸಂಪೂರ್ಣ  ಬಂದ್‌ ಮುಂದುವರಿಯಲಿದ್ದು, ಈ ವೇಳೆ ಯಾವುದೇ ವಾಣಿಜ್ಯ ವ್ಯವಹಾರಗಳನ್ನು ನಿಷೇಧಿಸಲಾಗಿರುತ್ತದೆ. ಮೆಡಿಕಲ್‌ ಸ್ಟೋರ್‌, ಅಡುಗೆ ಗ್ಯಾಸ್, ಹಾಲು, ದಿನಪತ್ರಿಕೆ, ದಿನಗಳಕೆಯ ವಸ್ತುಗಳ ಸಾಗಾಟ ಹೊರತುಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅನುಮತಿ ನಿರಾಕರಿಸಲಾಗಿದೆ ಹಾಗೂ ದಿನಬಳಕೆಯ ಸಾಮಾಗ್ರಿಗಳ ಲೋಡ್-‌ ಅನ್‌ ಲೋಡ್‌ ಕಾರ್ಮಿಕರು, ಮೆಡಿಕಲ್‌ ಸ್ಟೋರ್‌ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾವುದೇ ಜನಸಂಚಾರವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಭಾನುವಾರವೂ ಸಂಪೂರ್ಣ ಬಂದ್ : ಜಿಲ್ಲೆಯ ಜನರಿಗೆ ಎಸ್ಪಿ ಸೂಚನೆ Rating: 5 Reviewed By: karavali Times
Scroll to Top