ಮಂಗಳೂರು (ಕರಾವಳಿ ಟೈಮ್ಸ್) : ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದ ನಡುವೆ ಇದೀಗ ಕೊರೋನಾ ವೈರಸ್ ಪ್ರಯುಕ್ತ ಲಾಕ್ ಡೌನ್ ಘೋಷಣೆಯ ಬಳಿಕವಂತೂ ಆರ್ಥಿಕತೆ ಮತ್ತಷ್ಟು ಸ್ತಬ್ಧಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ-ಪಂಡಗಳೂ ಸೇರಿದಂತೆ ವಿವಿಧ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಾಗೂ ವಿದ್ಯಾರ್ಥಿ ಸಾಲದ ಮೊತ್ತಗಳನ್ನು ಹಿಂದಿನ ಬಾಕಿ ಹಾಗೂ ಈ ಬಾರಿಯ ಶೈಕ್ಷಣಿಕ ವರ್ಷದ್ದೂ ತಕ್ಷಣ ಮಂಜೂರಾತಿಗೆ ಸರಕಾರ ಕ್ರಮ ಕೈಗೊಳ್ಳುವ ಮೂಲಕ ಆರ್ಥಿಕ ಜಂಜಾಟಕ್ಕೆ ಒಂದಷ್ಟು ರಿಲೀಫ್ ನೀಡುವಂತೆ ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.
ಈಗಾಗಲೇ ಕಳೆದ ಹಾಗೂ ಅದಕ್ಕಿಂತ ಮುಂಚಿನ ಶೈಕ್ಷಣಿಕ ವರ್ಷದ ಪ್ರಿಮೆಟ್ರಿಕ್, ಪೋಸ್ಟ್ ಮೆಟ್ರಿಕ್, ಮೆರಿಟ್ ಕಂ ಮೀನ್ಸ್ ಸ್ಕಾಲರ್‍ಶಿಪ್‍ಗಳು ಹಾಗೂ ಅರಿವು ಮೊದಲಾದ ಶೈಕ್ಷಣಿಕ ಸಾಲದ ಮೊತ್ತಗಳು ವಿದ್ಯಾರ್ಥಿಗಳಿಗೆ ಮಂಜೂರಾತಿಗೆ ಬಾಕಿ ಇದ್ದು, ತಕ್ಷಣ ಎಲ್ಲಾ ವಿದ್ಯಾರ್ಥಿಗಳೂ ಈ ಎಲ್ಲಾ ಮೊತ್ತಗಳನ್ನು ತಕ್ಷಣ ಮಂಜೂರಾತಿಗೊಳಿಸುವ ಮೂಲಕ ಸರಕಾರ ವಿದ್ಯಾರ್ಥಿಗಳ ಹಾಗೂ ಪೋಷಕರ ಆರ್ಥಿಕ ಜಂಜಾಟಕ್ಕೆ ಮುಕ್ತಿ ನೀಡುಬೇಕು. ಆ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕಿಂತ ಮುಂಚಿವಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಪೂರ್ವ ಸಿದ್ದತೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಪೋಷಕರು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
0 comments:
Post a Comment