ನವದೆಹಲಿ (ಕರಾವಳಿ ಟೈಮ್ಸ್) : ವಾಟ್ಸಪ್ ಬಳಕೆದಾರರಿಗೆ ಇನ್ನು ಮುಂದೆ ಡಾರ್ಕ್ ಮೋಡ್ ಥೀಮ್ ಲಭ್ಯವಾಗಲಿದೆ. ಜಾಗತಿಕವಾಗಿ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಮಂಗಳವಾರ ರಾತ್ರಿಯಿಂದಲೇ ಹೊಸ ಡಾರ್ಕ್ ಮೋಡ್ ಆಯ್ಕೆ ಲಭ್ಯವಾಗುತ್ತಿದೆ. ಈ ಬಗ್ಗೆ ವಾಟ್ಸಪ್ ಹೊಸ ಅಪ್‍ಡೇಟ್ ಬಿಡುಗಡೆ ಮಾಡಿದೆ.
ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್‍ನಲ್ಲಿ ಲಭ್ಯ
ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಮೂಲಕ ಹೊಸ ಅಪ್‍ಡೇಟ್ ಲಭ್ಯವಿದ್ದು, ಬಳಕೆದಾರರು ವಾಟ್ಸಪ್ ಅಪ್‍ಡೇಟ್ ಮಾಡಿಕೊಂಡ ಬಳಿಕ ಹೊಸ ಥೀಮ್ ದೊರೆಯುತ್ತದೆ. ನಿಮ್ಮ ಫೆÇೀನ್ ಥೀಮ್ ಡಾರ್ಕ್ ಮೋಡ್ ಹೊಂದಿದ್ದರೆ, ವಾಟ್ಸಪ್ ಕೂಡ ಸ್ವಯಂಚಾಲಿತವಾಗಿ ಡಾರ್ಕ್ ಮೋಡ್‍ಗೆ ಬದಲಾಗಲಿದೆ.
ಕಣ್ಣಿಗೂ ಹಿತ, ಬ್ಯಾಟರಿಯೂ ಉಳಿಕೆ
ವಾಟ್ಸಪ್ ಡಾರ್ಕ್ ಮೋಡ್ ಬಳಕೆದಾರರ ಕಣ್ಣಿಗೂ ಹಿತವಾದ ಅನುಭವ ನೀಡುವುದರ ಜೊತೆಗೆ ಫೆÇೀನ್ ಬ್ಯಾಟರಿ ಉಳಿತಾಯಕ್ಕೂ ಸಹಕಾರಿ. ಈ ಮೊದಲು ವಿವಿಧ ಬೀಟಾ ಆವೃತ್ತಿ ಅಪ್‍ಡೇಟ್‍ಗಳಲ್ಲಿ ಡಾರ್ಕ್ ಮೋಡ್ ಅನ್ನು ಪರೀಕ್ಷಿಸಲಾಗಿತ್ತು. ಈಗ ವಾಟ್ಸಪ್ ಡಾರ್ಕ್ ಮೋಡ್ ಅನ್ನು ಅಂತಿಮವಾಗಿ ಎಲ್ಲ ಬಳಕೆದಾರರಿಗೂ ಬಿಡುಗಡೆ ಮಾಡಿದೆ. ಮುಂದೆ ವಾಟ್ಸಪ್ ವೆಬ್ ಕೂಡ ಡಾರ್ಕ್ ಮೋಡ್‍ನಲ್ಲಿ ಲಭ್ಯವಾಗಲಿದೆ.
ಡಾರ್ಕ್ ಮೋಡ್ ಬಳಕೆ ಹೇಗೆ?
ಡಾರ್ಕ್ ಮೋಡ್ ಇಷ್ಟಪಡುವವರು ಆಂಡ್ರಾಯ್ಡ್ 10 ಮತ್ತು ಐಓಎಸ್ 13 ಆವೃತ್ತಿಯಲ್ಲಿ ವಾಟ್ಸಪ್ ಡಾರ್ಕ್ ಮೋಡ್ ಬಳಸಬಹುದು. ವಾಟ್ಸಪ್ ಅನ್ನು ಮೊದಲು ಅಪ್‍ಡೇಟ್ ಮಾಡಿ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ವಾಟ್ಸಪ್ ಅಪ್‍ಡೇಟ್ ಮಾಡಿಕೊಳ್ಳಬೇಕು. ನಂತರ ವಾಟ್ಸಪ್ ಸೆಟ್ಟಿಂಗ್ಸ್‍ಗೆ ಹೋಗಿ, ಅದರಲ್ಲಿ ಚಾಟ್ಸ್ ಸೆಲೆಕ್ಟ್ ಮಾಡಿ, ಡಿಸ್‍ಪ್ಲೇ ಆಯ್ದುಕೊಳ್ಳಿ. ಡಿಸ್‍ಪ್ಲೇ ಅಡಿ, ಡಾರ್ಕ್ ಥೀಮ್ ಸೆಲೆಕ್ಟ್ ಮಾಡಿ. ಈಗ ನಿಮ್ಮ ಫೆÇೀನ್‍ನಲ್ಲಿ ವಾಟ್ಸಪ್ ಡಾರ್ಕ್ ಮೋಡ್ ಮೂಲಕ ತೆರೆದುಕೊಳ್ಳುತ್ತದೆ.
0 comments:
Post a Comment