POLICE WON THE TOSS AND ELECTED TO BAT FIRST ವಾಟ್ಸಪ್ ಸಂದೇಶ : ಶಿವಮೊಗ್ಗ ನಾಗರಿಕರ ವತಿಯಿಂದ ಜಿಲ್ಲಾಡಳಿತಕ್ಕೆ ಒಂದು ಮನವಿ - Karavali Times POLICE WON THE TOSS AND ELECTED TO BAT FIRST ವಾಟ್ಸಪ್ ಸಂದೇಶ : ಶಿವಮೊಗ್ಗ ನಾಗರಿಕರ ವತಿಯಿಂದ ಜಿಲ್ಲಾಡಳಿತಕ್ಕೆ ಒಂದು ಮನವಿ - Karavali Times

728x90

26 March 2020

POLICE WON THE TOSS AND ELECTED TO BAT FIRST ವಾಟ್ಸಪ್ ಸಂದೇಶ : ಶಿವಮೊಗ್ಗ ನಾಗರಿಕರ ವತಿಯಿಂದ ಜಿಲ್ಲಾಡಳಿತಕ್ಕೆ ಒಂದು ಮನವಿ



ಶಿವಮೊಗ್ಗ (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಸರಕಾರದ ಆದೇಶ, ಪೊಲೀಸರ ವರ್ತನೆ ಹಾಗೂ ಜನರ ಗೊಂದಲ ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಜನ ಇಲ್ಲಿನ ಜಿಲ್ಲಾಡಳಿತಕ್ಕೆ ಮನವಿಯೊಂದನ್ನು ರವಾನಿಸಿದ್ದಾರೆ.

ಪ್ರಧಾನಿ ಅವರ ಲಾಕ್ ಡೌನ್ ಬಗ್ಗೆ ಜಿಲ್ಲಾಡಳಿತ ಜನತೆಗೆ ಸಮರ್ಪಕ ಮಾಹಿತಿ ನೀಡಲು ವಿಫಲವಾಗಿರುವ ಹಿನ್ನಲೆಯಲ್ಲಿ ಜನ ಪೊಲೀಸರ ಲಾಠಿ ಏಟಿಗೆ ಗುರಿಯಾಗಬೇಕಾಗಿದೆ. ಮಾಧ್ಯಮಗಳಲ್ಲಿ ಲಾಠಿ ಪ್ರಹಾರದ ವರದಿ ಪ್ರಸಾರವಾಗುತ್ತಿದೆ. ಇದರ ಬದಲಾಗಿ ಜನ ಅಗತ್ಯ ಸೇವೆಗಳಿಗಾಗಿ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂಬ ಜಾಗೃತಿ ಪ್ರಕಟವಾಗುತ್ತಿಲ್ಲ. ಕಛೇರಿಗಳಲ್ಲಿ ಈ ಬಗ್ಗೆ ಮಾಹಿತಿ ನೀಡುವ ಕಾರ್ಯವೂ ನಡೆಯುತ್ತಿಲ್ಲ.

ಜನರಲ್ಲಿ ಪೆÇಲೀಸರನ್ನು ಕಂಡರೆ ಭಯವಿದೆ, ಪೆÇಲೀಸರು ಕೂಡ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಆದರೆ ಪೊಲೀಸರು ಜನರಿಗೆ ಭಯ ಉಂಟುಮಾಡುವುದನ್ನು ಬಿಟ್ಟು ಜನರ ಮನವೊಲಿಸಿ ಪ್ರೀತಿಯಿಂದ ಮನೆಗೆ ತೆರಳುವಂತೆ ಮಾಡಲು ಪ್ರಯತ್ನಿಸಬೇಕಾಗಿದೆ. ಗ್ರಾಮಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಇರುವುದಿಲ್ಲ ಇಂತಹ ಕಡೆಗಳಲ್ಲಿ ಬಡ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಬೇಕಿದೆ. ಏಕೆಂದರೆ ಹಸಿವು ತಾಳಲಾರದೆ ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಹುಡುಕಿಕೊಂಡು ಜನ ತೆರಳುವಾಗ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪರಿಸ್ಥಿತಿ ಇದೆ.

ದಿನಸಿ ಅಂಗಡಿ ಇರುತ್ತದೆ ಎಂದು ಮಾಧ್ಯಮಗಳಲ್ಲಿ ಬರುವ ಸುದ್ದಿ ಓದಿ ಶಿವಮೊಗ್ಗದ ದಿನಸಿ ಅಂಗಡಿಗಳತ್ತ ಜನ ಧಾವಿಸಿದರೆ, ಪೊಲೀಸರು ಬಂದು ದಿನಸಿ ಅಂಗಡಿ ಮುಚ್ಚಿಸುತ್ತಿದ್ದಾರೆ. ಸೋಶಿಯಲ್ ಡಿಸ್ಟೆನ್ಸ್ ಬಗ್ಗೆ, ಕೊರೋನ ವೈರಸ್ ಹರಡುವುದು ಹೇಗೆ ಎಂಬ ಜಾಗೃತಿ ಜನರಲ್ಲಿ ಮೂಡಿಸಬೇಕಾಗಿದೆ. ಜಿಲ್ಲಾಡಳಿತದ ವತಿಯಿಂದ ಒಂದು ವಿಡಿಯೋ ತುಣುಕು ಮಾಡಿ ವೈರಲ್ ಮಾಡಿದರೆ ಒಳ್ಳೆಯದು ಎಂಬ ಆಗ್ರಹವನ್ನು ಶಿವಮೊಗ್ಗ ಜಿಲ್ಲೆಯ ಜನ ಇಲ್ಲಿನ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಸರಿಯಾದ ಮಾಹಿತಿ ಹಾಗೂ ಜಾಗೃತಿ ಇಲ್ಲದೆ ಜನಸಾಮಾನ್ಯರು ಮತ್ತು ಪೆÇಲೀಸ್ ಇಲಾಖೆಯ ಮಧ್ಯೆ ಅಂತರ ಏರ್ಪಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ POLICE WON THE TOSS AND ELECTED TO BAT FIRST ಎಂಬ ಸಂದೇಶ ಹರಿದಾಡುತ್ತಿದೆ. ಹಾಗಾಗಿ ಜಾಗೃತಿ ಹಾಗೂ ಮಾಹಿತಿ ಎರಡೂ ಕೂಡ ಅಗತ್ಯ ಎಂದು ಜಿಲ್ಲೆಯ ಜನ ಅಭಿಪ್ರಾಯಪಟ್ಟಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: POLICE WON THE TOSS AND ELECTED TO BAT FIRST ವಾಟ್ಸಪ್ ಸಂದೇಶ : ಶಿವಮೊಗ್ಗ ನಾಗರಿಕರ ವತಿಯಿಂದ ಜಿಲ್ಲಾಡಳಿತಕ್ಕೆ ಒಂದು ಮನವಿ Rating: 5 Reviewed By: karavali Times
Scroll to Top