ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಶಂಭೂರು ಎಂಬಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದ ಪೊಲೀಸರು ಜಾನುವಾರು ಸಹಿತ ಆರೋಪಿಗಳಾದ ವಾಹನ ಚಾಲಕ ಅಡ್ಯಾರುಪದದವು ನಿವಾಸಿ ಮಹಮ್ಮದ್ ಸಾದಿಕ್, ಶಂಭೂರು ನಿವಾಸಿ ಅಂತೋನಿ ವೇಗಸ್, ಮಂಗಳೂರು ಕುಡುಪು ನಿವಾಸಿ ಅನಿಲ್ ನೊರೊನ್ಹಾ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಪಿಕಪ್ ವಾಹನ ಸಹಿತ ಒಟ್ಟು ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
0 comments:
Post a Comment