ಕಂಚಿನಡ್ಕಪದವು ತ್ಯಾಜ್ಯ ಡಂಪ್ ವಿರೋಧಿಸಿ ಸಜಿಪ ಬಂದ್ - Karavali Times ಕಂಚಿನಡ್ಕಪದವು ತ್ಯಾಜ್ಯ ಡಂಪ್ ವಿರೋಧಿಸಿ ಸಜಿಪ ಬಂದ್ - Karavali Times

728x90

19 March 2020

ಕಂಚಿನಡ್ಕಪದವು ತ್ಯಾಜ್ಯ ಡಂಪ್ ವಿರೋಧಿಸಿ ಸಜಿಪ ಬಂದ್



ಬಂಟ್ವಾಳ (ಕರಾವಳಿ ಟೈಮ್ಸ್) : ಜಿಲ್ಲಾಡಳಿತ, ಬಂಟ್ವಾಳ ಪುರಸಭಾಧಿಕಾರಿಗಳು ಹಾಗೂ ಪೊಲೀಸರು ಸಜಿಪನಡು ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿ ಗುರುವಾರ ಸಜಿಪನಡು ಪೇಟೆಯಲ್ಲಿ ನಾಗರಿಕರು ಸ್ವಯಂಪ್ರೇರಿತ ಬಂದ್ ಆಚರಿಸಿದರು.

ಬುಧವಾರ ಸಂಜೆ ಸ್ಥಳೀಯರ ವಿರೋಧದ ನಡುವೆಯೂ ಪೋಲೀಸ್ ಸರ್ಪಗಾವಲಿನಲ್ಲಿ ಬಂಟ್ವಾಳ ಪುರಸಭಾಧಿಕಾರಿಗಳು ಸಜಿಪ-ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ಡಂಪ್ ಮಾಡಿದ್ದರು.

ಈ ಬಗ್ಗೆ ಸ್ಥಳೀಯರು ಮಹಿಳೆಯರು ಹಾಗೂ ಅಪ್ರಾಪ್ತ ಮಕ್ಕಳನ್ನು ಸೇರಿಸಿ ತಡೆಯೊಡ್ಡಿದ್ದರು. ಬಳಿಕ ಪೊಲೀಸರು ಬಲಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿ ತ್ಯಾಜ್ಯ ಸುರಿಯಲು ಅವಕಾಶ ಮಾಡಿಕೊಟ್ಟಿದ್ದರು.

ಈ ಘಟನೆಯನ್ನು ಖಂಡಿಸಿ ಇಲ್ಲಿನ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕಂಚಿನಡ್ಕಪದವು ತ್ಯಾಜ್ಯ ಡಂಪ್ ವಿರೋಧಿಸಿ ಸಜಿಪ ಬಂದ್ Rating: 5 Reviewed By: karavali Times
Scroll to Top