ಬಂಟ್ವಾಳ (ಕರಾವಳಿ ಟೈಮ್ಸ್) : ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೋವಿಡ್-19 ದೃಢಪಟ್ಟಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಘೋಷಿಸಿರುವ ಹಿನ್ನಲೆಯಲ್ಲಿ ಸಜಿಪನಡು ಗ್ರಾಮವನ್ನು ಇದೀಗ ದಿಗ್ಬಂಧನ ಸ್ಥಿತಿಯಲ್ಲಿರಿಸಲಾಗಿದ್ದು, ಗ್ರಾಮದ ಎಲ್ಲಾ ಕಡೆಯು ನಾಕಾಬಂಧಿ ವಿಧಿಸಲಾಗಿದೆ.
ಇದರ ಭಾಗವಾಗಿ ಸಜಿಪದಿಂದ ತುಂಬೆ ಡ್ಯಾಂ ಮೂಲಕ ಹಾದು ಬರುತ್ತಿದ್ದ ಕಾಲ್ನಡಿಗೆ ದಾರಿಯನ್ನೂ ಶುಕ್ರವಾರ ರಾತ್ರಿಯಿಂದ ಬಂದ್ ಮಾಡಲಾಗಿದೆ. ಮಂಗಳೂರು ಮತ್ತಿತರ ಕಡೆ ತೆರಳುತ್ತಿದ್ದ ಸಜಿಪದ ನಾಗರಿಕರು ತುಂಬೆಯಲ್ಲಿ ಇಳಿದು ತುಂಬೆ ಡ್ಯಾಂ ಮೇಲಿನ ಕಾಲ್ನಡಿಗೆ ದಾರಿಯಲ್ಲಿ ಸಾಗುತ್ತಿದ್ದರು. ಇದೀಗ ಕೊರೋನಾ ವೈರಸ್ ಭೀತಿ ಈ ಕಾಲ್ನಡಿಗೆ ದಾರಿಯನ್ನೂ ಮುಚ್ಚುವಂತೆ ಮಾಡಿದೆ. ಇಲ್ಲಿನ ಕಾಲು ದಾರಿಯನ್ನು ಕೆಲವು ದಿನಗಳ ಮಟ್ಟಿಗೆ ತಾತ್ಕಾಲಿಕ ಬಂದ್ ಮಾಡಲಾಗುತ್ತಿದೆ.
0 comments:
Post a Comment