ಸೈಫುಲ್ಲಾ ಸಖಾಫಿ (ಅಧ್ಯಕ್ಷ) |
ಹಂಝ ಹಮೀದ್ ಟಿ.ಎಚ್. ಕಲಾಯಿ (ಪ್ರಧಾನ ಕಾರ್ಯದರ್ಶಿ) |
ಹಕೀಂ ವರಕೋಡಿ (ಕೋಶಾಧಿಕಾರಿ) |
ಬಂಟ್ವಾಳ (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಅಮ್ಮುಂಜೆ ಸೆಕ್ಟರ್ ಇದರ ನೂತನ ಅಧ್ಯಕ್ಷರಾಗಿ ಸೈಫುಲ್ಲಾ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಹಮೀದ್ ಟಿ.ಎಚ್. ಕಲಾಯಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸೆಕ್ಟರ್ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಸೆಕ್ಟರ್ ಉಸ್ತುವಾರಿ ಸಿದ್ದಿಕ್ ಬಜ್ಪೆ ಹಾಗೂ ಮೂಡಬಿದ್ರೆ ಡಿವಿಷನ್ ಅಧ್ಯಕ್ಷ ರಿಯಾಝ್ ಸಹದಿ, ವೀಕ್ಷಕ ಜಬ್ಬಾರ್ ಮಳಲಿ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಉಪಾಧ್ಯಕ್ಷರುಗಳಾಗಿ ನೌಫಾಲ್ ಇಂಜಿನಿಯರ್ ದೆಮ್ಮಲೆ, ಉಬೈದುಲ್ಲಾ ಮಲ್ಲೂರು, ಜೊತೆ ಕಾರ್ಯದರ್ಶಿಗಳಾಗಿ ಇಬ್ರಾಹಿಂ ಖಲೀಲ್ ಅಬ್ಬೆಟ್ಟು, ಮುಹಮ್ಮದ್ ನಿಝಾಂ ಅಮ್ಮುಂಜೆ, ಕೋಶಾಧಿಕಾರಿಯಾಗಿ ಹಕೀಂ ವರಕೋಡಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಫತಾಹಾ ಅವರನ್ನು ಆರಿಸಲಾಯಿತು. ಇತರ 12 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ನೇಮಿಸಲಾಯಿತು. ಇಬ್ರಾಹಿಂ ಖಲೀಲ್ ಅಬ್ಬೆಟ್ಟು ಸ್ವಾಗತಿಸಿ, ಹಂಝ ಹಮೀದ್ ಟಿ.ಎಚ್. ವಂದಿಸಿದರು.
0 comments:
Post a Comment