ವಿಟ್ಲ (ಕರಾವಳಿ ಟೈಮ್ಸ್) : ಸುನ್ನಿ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ವಿಟ್ಲ ರೀಜಿನಲ್ ವತಿಯಿಂದ ಎಸ್‍ಎಂಎ ಅಲರ್ಟ್-2020 ಕಾರ್ಯಕ್ರಮ ಇತ್ತೀಚೆಗೆ ವಿಟ್ಲ ಶಾಂತಿನಗರ ಮದ್ರಸ ಭವನದಲ್ಲಿ ನಡೆಯಿತು.
ಎಸ್‍ಎಂಎ ವಿಟ್ಲ ರಿಜಿನಲ್ ಅಧ್ಯಕ್ಷ ಶರೀಫ್ ಉಕ್ಕುಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‍ಎಂಎ ಜಿಲ್ಲಾಧ್ಯಕ್ಷ ಹಮೀದ್ ಕೊಡಂಗಾಯಿ ಉದ್ಘಾಟಿಸಿದರು. ಎಸ್‍ಎಂಎ ರಾಜ್ಯ ಕಾರ್ಯದರ್ಶಿ ಅಬ್ದುರಹ್ಮಾನ್ ಮದನಿ ಜಪ್ಪು ವಿಷಯ ಮಂಡಿಸಿದರು. ವಿಟ್ಲ ಎಸ್.ಜೆ.ಎಂ. ಅಧ್ಯಕ್ಷ ಅಬ್ದುರಹ್ಮಾನ್ ಮದನಿ ಪೆರುವಾಯಿ, ಹಕೀಂ ಶಾಂತಿನಗರ, ವಿಟ್ಲ ಝೋನ್ ಕಾರ್ಯದರ್ಶಿ ಕಾಸಿಂ ಸಖಾಫಿ, ಹಾರಿಸ್ ಮದನಿ ಶಾಂತಿನಗರ, ಹಾರಿಸ್ ಒಕ್ಕೆತ್ತೂರು, ಅಬೂಬಕ್ಕರ್, ಎಸ್‍ಎಂಎ ಕೋಶಾಧಿಕಾರಿ ಉಸ್ಮಾನ್, ಕಾಪೆರ್Çೀರೇಶನ್ ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು. ಎಸ್‍ಎಂಎ ಪ್ರಧಾನ ಕಾರ್ಯದರ್ಶಿ ಮಜೀದ್ ಸಖಾಫಿ ಸ್ವಾಗತಿಸಿ, ರಜಾಕ್ ಸಅದಿ ವಂದಿಸಿದರು.
0 comments:
Post a Comment