ಕರ್ನಾಟಕ ಪೋಸ್ಟಲ್ ವೃತ್ತದಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ - Karavali Times ಕರ್ನಾಟಕ ಪೋಸ್ಟಲ್ ವೃತ್ತದಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ - Karavali Times

728x90

4 March 2020

ಕರ್ನಾಟಕ ಪೋಸ್ಟಲ್ ವೃತ್ತದಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ



ಮಂಗಳೂರು (ಕರಾವಳಿ ಟೈಮ್ಸ್) : ಅಂಚೆ ಇಲಾಖೆ, ಕರ್ನಾಟಕ ಪೋಸ್ಟಲ್ ವೃತ್ತದಲ್ಲಿ ಕಿರಿಯ ಲೆಕ್ಕ ಪತ್ರ ಪಾಲಕರು/ ಅಂಚೆ ಸಹಾಯಕರು/ ವಿಂಗಡನೆ ಸಹಾಯಕರು ಹಾಗೂ ಅಂಚೆ ವಿತರಕರ ಹುದ್ದೆಗಳ ನೇಮಕಾತಿಗಾಗಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಅರ್ಹ ಪ್ರತಿಭಾವಂತ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಬಡ್ಡಿ, ಚೆಸ್, ಖೋಖೊ, ಈಜು, ಬ್ಯಾಡ್ಮಿಂಟನ್ ಮುಂತಾದ 43 ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಮಟ್ಟದ ಶಾಲಾ ತಂಡ/ ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿದ ಅರ್ಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಕ್ರೀಡಾ ಸಾಧನೆ ಹಾಗೂ ಶೈಕ್ಷಣಿಕ ಸಾಧನೆ ಮಾತ್ರ ಪರಿಗಣಿಸಲಾಗುತ್ತದೆ. ಯಾವುದೇ ಪ್ರತ್ಯೇಕ ಪರೀಕ್ಷೆಗಳಿರುವುದಿಲ್ಲ.
ಕಿರಿಯ ಲೆಕ್ಕ ಪತ್ರ ಪಾಲಕರು 2 ಹುದ್ದೆಗಳು, ಅಂಚೆ ಸಹಾಯಕರು/ ವಿಂಗಡನೆ ಸಹಾಯಕರು 15 ಹುದ್ದೆಗಳು ಹಾಗೂ ಅಂಚೆ ವಿತರಕರು 27 ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ 200/- ರೂಪಾಯಿ ಮೊತ್ತವನ್ನು ಯಾವುದೇ ಅಂಚೆ ಕಛೇರಿಯಲ್ಲಿ ಪಾವತಿಸಬಹುದಾಗಿದೆ.  ಶುಲ್ಕ ಪಾವತಿಸಲು ಮಾರ್ಚ್ 12 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸ್ವೀಕಾರಕ್ಕೆ ಮಾರ್ಚ್ 16 ಕೊನೆ ದಿನಾಂಕವಾಗಿದೆ. ಈ ಬಗ್ಗೆ ಪೂರ್ಣ ವಿವರಗಳಿಗಾಗಿ https://www.karnatakapost.gov.in ಗೆ ಭೇಟಿ ನೀಡಬಹುದು ಎಂದು ಮಂಗಳೂರು ಅಂಚೆ ಇಲಾಖಾ ಪ್ರಕಟಣೆ ತಿಳಿಸಿದೆ.









  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಪೋಸ್ಟಲ್ ವೃತ್ತದಲ್ಲಿ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top