ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಸ್ತೆ ದಾಟುತ್ತಿದ್ದ ನರಿಕೊಂಬು ನಿವಾಸಿ ಸರೋಜಿನಿ (58) ಅವರಿಗೆ ಸರಕಾರಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಸರೋಜಿನಿ ಅವರು ಸೋಮವಾರ ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ಪಾಣೆಮಂಗಳೂರು ಮಾಂಡೋವಿ ಮೋಟಾರು ಶೋ ರೂಮ್ ಎದುರುಗಡೆ ರಸ್ತೆ ದಾಟುವ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸರೋಜಿನಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಆ ವೇಳೆ ಆಸ್ಪತ್ರೆಗೆ ದಾಖಲು ಮಾಡಲು ಯಾವುದೇ ವಾಹನ ಸಿಗದೆ ಇದ್ದ ಕಾರಣ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದ ಮೆಲ್ಕಾರ್ ಟ್ರಾಫಿಕ್ ಎಸ್ ಐ ರಾಜೇಶ್ ಕೆ ವಿ ಅವರು ತಕ್ಷಣ ತಮ್ಮ ಜೀಪಿನಲ್ಲಿ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತಲೆಗೆ ಗಂಭೀರ ಪ್ರಮಾಣದ ಗಾಯವಾದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
0 comments:
Post a Comment