ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಹೋಟೆಲ್ ಹೈವೇ ಪ್ಯಾಲೇಸ್ ಬಳಿ ಊಟಕ್ಕೆಂದು ಬಂದಿದ್ದ ಲಾರಿ ಚಾಲಕಗೆ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಶುಕ್ರವಾರ ಮಧ್ಯರಾತ್ರಿ ವೇಳೆಗೆ ವಿಟ್ಲ ಸಮೀಪದ ಕೇಪು ಗ್ರಾಮದ ನಿವಾಸಿ ಸುರೇಶ ಕೆ (30) ಎಂಬವರು ಊಟ ಮಾಡಲು ಪಾಣೆಮಂಗಳೂರು ಹೈವೇ ಪ್ಯಾಲೇಸ್ ಬಳಿ ಲಾರಿ ನಿಲ್ಲಿಸಿದಾಗ ಅಲ್ಲಿಯೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ನಿಂತಿದ್ದ ವ್ಯಕ್ತಿಯು ಪಾರ್ಕಿಂಗ್ ವಿಷಯಕ್ಕೆ ಸಂಬಂದಿಸಿ ಕ್ಷುಲ್ಲಕ ಮಾತಿನ ಚಕಮಕಿ ನಡೆಸಿದ್ದು, ಬಳಿಕ 5 ಜನರ ಗುಂಪು ಸೇರಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಯಿಂದ ಮತ್ತು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಬಳಿಕ ಸುರೇಶ್ ಅವರ ಸ್ನೇಹಿತರಾದ ಶರತ್ ಮತ್ತು ವಸಂತ ಎಂಬವರು ಬಿಡಿಸಲು ಬಂದಾಗ ಅವರನ್ನು ದೂಡಿ ಹಾಕಿರುತ್ತಾರೆ, ಲಾರಿಯ ಗಾಜನ್ನು ಪುಡಿಗೈದಿದ್ದಾರೆ ಎಂದು ಸುರೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸರು ಸ್ಥಳದಲ್ಲಿದ್ದ ಜನರನ್ನು ಚದುರಿಸಿದ್ದು, ಮಧ್ಯರಾತ್ರಿ ತೆರೆದಿದ್ದ ಹೋಟೆಲ್ ಬಂದ್ ಮಾಡಿಸಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಆರೋಪಿಗಳ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸುರೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 143, 147, 148, 504, 323, 324, 506, 427 ಜೊತೆ 149 ಐಪಿಸಿ ಮತ್ತು ಕಲಂ 2(ಎ) ಕೆ ಪಿ ಡಿ ಎಲ್ ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment