7 ವಿಕೆಟ್‍ಗಳಿಂದ ಟೀಂ ಇಂಡಿಯಾಗೆ ಸೋಲುಣಿಸಿದ ಕಿವೀಸ್ ಪಡೆ
ಒನ್ ಡೇ ಬಳಿಕ ಇದೀಗ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಗೈದ ಕಿವಿಗಳುಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ : ಟೀಂ ಇಂಡಿಯಾ ಪ್ರದರ್ಶನಕ್ಕೆ ಅಭಿಮಾನಿಗಳ ಆಕ್ರೋಶ
90 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು 34 ರನ್ ಮಾತ್ರ ಪೇರಿಸಿ 46 ಓವರ್ ಗಳಲ್ಲಿ 124 ರನ್ ಗಳಿಗೆ ಆಲೌಟ್ ಆಗಿದೆ. 132 ರನ್ ಗಳ ಸುಲಭ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ 32.5 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ತಲುಪುವ ಮೂಲಕ ಜಯಭೇರಿ ಭಾರಿಸಿದೆ.
ನ್ಯೂಜಿಲೆಂಡ್ ಪರವಾಗಿ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ಟಾಮ್ ಬ್ಲುಂಡೆಲ್ ಮೊದಲ ವಿಕೆಟಿಗೆ 28 ಓವರ್ ಗಳಲ್ಲಿ 103 ರನ್ ಜೊತೆಯಾಟವಾಡಿದರು. ಟಾಮ್ ಲಾಥಮ್ 52 (74 ಎಸೆತ, 10 ಬೌಂಡರಿ) ಸಿಡಿಸಿದರೆ, ಬ್ಲುಂಡೆಲ್ 55 ರನ್ (113 ಎಸೆತ, 8 ಬೌಂಡರಿ, 1 ಸಿಕ್ಸರ್) ಭಾರಿಸಿ ಔಟಾದರು.
ಎರಡನೇ ಇನ್ನಿಂಗ್ಸ್ ನಲ್ಲಿ ವೇಗದ ಬೌಲರ್ ಗಳಾದ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದರೆ, ಟಿಮ್ ಸೌಥಿ 3 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಪರಿಣಾಮ ನ್ಯೂಜಿಲೆಂಡ್ ಸುಲಭವಾಗಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಮೂರನೇ ದಿನ ಭಾರತದ ಪರ ರವೀಂದ್ರ ಜಡೇಜಾ ಔಟಾಗದೇ 16 ರನ್ (22 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಅಲ್ಪಪ್ರಮಾಣದಲ್ಲಿ ಪ್ರತಿರೋಧ ಒಡ್ಡಿದರು.
ನ್ಯೂಜಿಲೆಂಡ್ ಪ್ರವಾಸದ ಈ ಸರಣಿಯಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಗೈದರೆ, 3 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಸಂಕ್ಷೀಪ್ತ ಸ್ಕೋರ್
ಭಾರತ : 242 ಮತ್ತು 124
ನ್ಯೂಜಿಲೆಂಡ್ : 235 ಮತ್ತು 132/2
0 comments:
Post a Comment