ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ಜನಸಂದಣಿ ನಿಗ್ರಹ ಸೂಚನೆ ನೀಡಿದ ಹೊರತಾಗಿಯೂ ತಾಲೂಕಿನ ಮಾಣಿಯಲ್ಲಿ ಶನಿವಾರ ವಾರದ ಸಂತೆ ಎಂದಿನಂತೆ ಚಾಲೂಗೊಂಡಿದ್ದು, ತಾಲೂಕು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸಂತೆ ನಿಲ್ಲಿಸಿದ್ದಾರೆ.
ಮಾಣಿ ಗ್ರಾಮ ಪಂಚಾಯತ್ ಅಧೀನದಲ್ಲಿ ಖಾಸಗಿ ವ್ಯಕ್ತಿ ಟೆಂಡರ್ ಪಡೆದು ನಡೆಸುವ ಮಾಣಿ ವಾರದ ಸಂತೆ ಪ್ರತಿ ಶನಿವಾರ ನಡೆಯುತ್ತದೆ. ಹಳ್ಳಿ-ಗ್ರಾಮಾಂತರ ಪ್ರದೇಶಗಳ ಬಡ ಜನರು ಈ ಸಂತೆಗೆ ಬಂದು ಸಾಮಾಗ್ರಿಗಳನ್ನು ಖರೀದಿಸುತ್ತಾರೆ. ಇಂದು ಶನಿವಾರ ಕೂಡಾ ಬೆಳಿಗ್ಗೆ ಆರು ಗಂಟೆಗೇ ಇದು ಆರಂಭಗೊಂಡಿತ್ತು.
ಮಾಣಿಯಲ್ಲಿ ಶನಿವಾರದ ಸಂತೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಸಂತೆ ನಿಲ್ಲಿಸುವಂತೆ ಸೂಚಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಜೊತೆ ಬೇಟಿ ವಿಟ್ಲ ಎಸ್ಸೈ ವಿನೋದ್ ರೆಡ್ಡಿ ಪೊಲೀಸ್ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಸಂತೆ ನಿಲ್ಲಿಸಲು ಕ್ರಮ ಕೈಗೊಂಡಿದ್ದಾರೆ.
0 comments:
Post a Comment