ಮಂಗಳೂರು (ಕರಾವಳಿ ಟೈಮ್ಸ್) : ಕೇರಳ-ಕಾಸರಗೋಡು ಮಳ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ 5ನೇ ಸ್ವಲಾತ್ ವಾರ್ಷಿಕೋತ್ಸವ ಮುಂಬಯಿಯ ದಾದರ್ ಪೂರ್ವದ ಲತೀಫಿಯ್ಯ ಸುನ್ನಿ ಮಸೀದಿಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶಹೀರ್ ಅಲ್- ಬುಖಾರಿ ಮತ್ತು ಕಾರ್ಯದರ್ಶಿ ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್-ಬುಖಾರಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣಗೈದರು.
ಇದೇ ವೇಳೆ ಮಳ್‍ಹರ್ ವಿದ್ಯಾಸಂಸ್ಥೆಯ ಶಿಲ್ಪಿ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್-ಬುಖಾರಿ ಅವರ ಕುರಿತು ಬರೆದ ‘ನೆರಳು’ ಕೃತಿಯನ್ನು ಸಯ್ಯಿದ್ ಶಹೀರ್ ಬಿಡುಗಡೆ ಗೊಳಿಸಿದರು.
ಮಳ್‍ಹರ್ ಮುದರ್ರಿಸ್ ಝುಬೈರ್ ಸಖಾಫಿ, ಹಸನ್ ಮುಸ್ಲಿಯಾರ್ ಮುಂಬ್ರಾ, ಲತೀಫಿಯ್ಯ ಸುನ್ನಿ ಮಸೀದಿಯ ಖತೀಬ್ ಹಾಫಿಳ್ ಅಬ್ದುಲ್ ಕರೀಂ ಅಶ್ರಫಿ, ಎಐಟಿಯುಸಿ ಕೇರಳ ಉಪಾಧ್ಯಕ್ಷ ಮುಸ್ತಫ್ ಎಂ.ಡಿ ಕಡಂಬಾರ್, ಟೆಂಕರ್ ಮೂಲೆ ಮಸೀದಿ ಖತೀಬ್ ಇಸ್ಮಾಯಿಲ್ ಅಂಜದಿ, ಪ್ರಬಂಧಕ ಸಿದ್ದೀಕ್ ಮೌಲಾನಾ ಮಳ್‍ಹರ್, ಅಬ್ದುಲ್ ಹಕೀಂ ಅಂಜದಿ, ಮಳ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕಾಧ್ಯಕ್ಷ ಅಬ್ದುಲ್ ಸತ್ತಾರ್ ಬದ್ರಿಯ್ಯಾ, ಉಪಾಧ್ಯಕ್ಷ ಮುಸ್ತಾಫ ಕೆ.ಪಿ., ಕೋಶಾಧಿಕಾರಿ ಅಶ್ರಫ್ ಬೋಳ್ಮಾರ್, ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ಕಿನ್ಯಾ, ಸ್ವಾಗತ ಸಮಿತಿ ಅಧ್ಯಕ್ಷ ಝಕರಿಯ್ಯಾ ಸಿ.ಎಂ, ಮುಂಬಯಿ ಕೇರಳ ಮುಸ್ಲಿಂ ಜಮಾಅತ್ ಸದಸ್ಯರಾದ ಅಶ್ರಫ್ ಫೌಟೆಂಟ್, ಅಶ್ರಫ್ ಜೋಗಿಶ್ವರಿ ಮೊದಲಾದವರು ಉಪಸ್ಥಿತರಿದರು.
ಮಳ್ಲ್‍ಹರ್ ವಿದ್ಯಾ ಸಂಸ್ಥೆಯ ಮುಂಬಯಿ ವ್ಯವಸ್ಥಾಪಕ ಸಿದ್ದೀಕ್ ಮೌಲಾನಾ ಮಳ್‍ಹರ್ ಸ್ವಾಗತಿಸಿ, ಅಹ್ಮದ್ ಶಿಹಾನ್ ಉಳ್ಳಾಲ್ ನಾತ್ ಪಠಿಸಿದರು. ಸಂಘಟನಾ ಕಾರ್ಯದರ್ಶಿ ಇಲ್ಯಾಸ್ ಟಿ.ಎಂ. ತೌಡುಗೋಳಿ ವಂದಿಸಿದರು.
0 comments:
Post a Comment