ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಂತೆ ಶಾಲಾ ಶಿಕ್ಷಕರಿಗೂ ರಜೆ ಘೋಷಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರಿಗೆ ಮಾರ್ಚ್ 31ರವರೆಗೆ ಸರ್ಕಾರ ರಜೆ ಘೋಷಿಸಿದೆ. 7-9ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 31 ರವರೆಗೆ ಪರೀಕ್ಷೆ ಮುಂದೂಡಿ ಶಿಕ್ಷಣ ಇಲಾಖೆ ರಜೆ ನೀಡಿದೆ. ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶ ಮಾಡಿತ್ತು. ಆದರೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಈಗ ಶಿಕ್ಷಕರಿಗೂ ಮಾರ್ಚ್ 31ರವರೆಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ.
ಆದೇಶದಲ್ಲಿ ಏನಿದೆ?
1. ಶಿಕ್ಷಕರು ಮಾರ್ಚ್ 31ರವರೆಗೆ ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸುವುದು.
2. ಮಾರ್ಚ್ 31ರವರೆಗೆ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರ ರಜಾ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವುದು.
3. ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಗಳನ್ನು/ಇಮೇಲ್ ವಿಳಾಸಗಳನ್ನು ಶಾಲಾ ಶಿಕ್ಷಕರು ಪಡೆದುಕೊಳ್ಳುವುದು.
4. ಈ ರಜಾ ಅವಧಿಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ಯಾವುದೇ ಕಾರಣಕ್ಕೂ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ ಹಾಗೂ ಸರ್ಕಾರಕ್ಕೆ ಶಿಕ್ಷಕರ ಸೇವೆ ಅಗತ್ಯವಿದ್ದಾಗ ಕಡ್ಡಾಯವಾಗಿ ಸೇವೆ ಹಾಜರಾಗತಕ್ಕದ್ದು.

0 comments:
Post a Comment