ಬಂಟ್ವಾಳ ಪುರವಾಸಿಗಳ ಹಿತ ಪುರಸಭೆಯ ಜವಾಬ್ದಾರಿಯಾಗಲಿ : ಲತೀಫ್ ಖಾನ್ ಗೂಡಿನಬಳಿ - Karavali Times ಬಂಟ್ವಾಳ ಪುರವಾಸಿಗಳ ಹಿತ ಪುರಸಭೆಯ ಜವಾಬ್ದಾರಿಯಾಗಲಿ : ಲತೀಫ್ ಖಾನ್ ಗೂಡಿನಬಳಿ - Karavali Times

728x90

26 March 2020

ಬಂಟ್ವಾಳ ಪುರವಾಸಿಗಳ ಹಿತ ಪುರಸಭೆಯ ಜವಾಬ್ದಾರಿಯಾಗಲಿ : ಲತೀಫ್ ಖಾನ್ ಗೂಡಿನಬಳಿ

ಲತೀಫ್ ಖಾನ್ ಗೂಡಿನಬಳಿ


ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ವ್ಯಾಪಕವಾಗುತ್ತಿರುವುದರಿಂದ ದೇಶಾದ್ಯಂತ ಘೋಷಣೆಯಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತೀ ಸ್ಥಳೀಯಾಡಳಿತಗಳು ಆಯಾ ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತವಾಗುವ ಮೂಲಕ ತಳಮಟ್ಟದಿಂದಲೇ ಜನ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದೆ. ಎಲ್ಲದಕ್ಕೂ ಕೇಂದ್ರ ಸರಕಾರ, ರಾಜ್ಯ ಸರಕಾರ, ಜಿಲ್ಲಾಡಳಿತಗಳ ಆದೇಶಕ್ಕೆ ಕಾಯದೆ ಸ್ಥಳೀಯ ಮಟ್ಟದಲ್ಲಿ ಇರುವ ಜನರ ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳು ಕೂತು ಚರ್ಚಿಸಿ ಅದಕ್ಕೆ ಬೇಕಾದ ಹಣಕಾಸು ಬಗ್ಗೆ ಸ್ಥಳೀಯ ಶಾಸಕರೊಂದಿಗೂ ಮಾಹಿತಿ ಹಂಚಿಕೊಂಡು ಅನುದಾನ ಮಂಜೂರಾತಿ ಪಡೆದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಸದಸ್ಯ ಲತೀಫ್ ಖಾನ್ ಗೂಡಿನಬಳಿ ಪ್ರತಿಕ್ರಯಿಸಿದ್ದಾರೆ.

ಕೊರೊನಾ ವೈರಸ್ ಹಿಮ್ಮಟ್ಟಿಸುವುದರ ಜೊತೆಗೆ ಜನರ ಬದುಕುವ ಹಕ್ಕು ಹಾಗೂ ಮೂಲಭೂತ ಅವಶಕ್ಯತೆಗಳೂ ಸರಕಾರಗಳ ಮೂಲ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಪುರಸಭಾಧಿಕಾರಿಗಳು ಸ್ಪಂದಿಸಬೇಕು. ಇಲ್ಲಿನ ದಿನಕೂಲಿ ಜನರ ದೈನಂದಿನ ಅವಶ್ಯಕತೆಗಳ ಬಗ್ಗೆ ತಿಳಿದುಕೊಂಡು ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಪುರವಾಸಿಗಳ ಹಿತ ಕಾಯಬೇಕು. ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿ ಎಲ್ಲಾ ಸದಸ್ಯರೂ ದಿನಪೂರ್ತಿ ಮನೆಯಲ್ಲೇ ಇರುವುದರಿಂದ ನೀರಿನ ಖರ್ಚು ಅಧಿಕವಾಗಿರುವುದರಿಂದ ಪುರಸಭಾ ನೀರು ಸರಬರಾಜು ಎಂದಿನ ದಿನಗಳಿಗಿಂತ ಜಾಸ್ತಿ ಪ್ರಮಾಣದಲ್ಲಿ ನೀಡುವ ಮೂಲಕ ಸ್ಪಂದಿಸಬೇಕಾಗಿದೆ. ಇಂತಹ ಹಲವು ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಇಲ್ಲಿನ ಪೌರ ಕಾರ್ಮಿಕರ ಹಿತದೃಷ್ಟಿಯೂ ಮುಖ್ಯವಾಗಬೇಕು. ಸಾಂಕ್ರಾಮಿಕ ರೋಗ ನಿವಾರಣಾ ಕ್ರಮವಾಗಿ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಪುರಸಭೆ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರವಾಸಿಗಳ ಹಿತ ಪುರಸಭೆಯ ಜವಾಬ್ದಾರಿಯಾಗಲಿ : ಲತೀಫ್ ಖಾನ್ ಗೂಡಿನಬಳಿ Rating: 5 Reviewed By: karavali Times
Scroll to Top