ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕೂರಿಯಾಳ ದುರ್ಗಾನಗರ ಬಳಿಯ ಜ್ಞಾನಜ್ಯೋತಿ ಗೆಳೆಯರ ಬಳಗ ಇದರ ಪ್ರಥಮ ವರ್ಷದ ಸಂಭ್ರಮಾಚರಣೆ ಮಾರ್ಚ್ 7 ರಂದು ನಡೆಯಲಿದೆ. ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ದಿನೇಶ್ ಪೂಜಾರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲಾ ಶಿಕ್ಷಕ ಮಹೇಶ್ ವಿ. ಕರ್ಕೇರ, ಪ್ರಗತಿಪರ ಕೃಷಿಕ ಲೇಖಾ ಪ್ರಸನ್ನ ಭಂಡಾರಿ, ಎಂ.ವಿ. ಶೆಟ್ಟಿ ಕಾಲೇಜು ಉಪನ್ಯಾಸಕ ಅಕ್ಷತಾ ಪವನ್ ಭಂಡಾರಿ ಮೊದಲಾದವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ತುಳಸಿ ಕಲಾ ತಂಡದ ಸದಸ್ಯರಿಂದ ಕೊರ್ಪಿನಾ ಕೊರೊಡೇ ಎಂಬ ವಿಭಿನ್ನ ಶೈಲಿಯ ಹಾಸ್ಯಮಯ ನಾಟಕ ನಡೆಯಲಿದೆ ಎಂದು ಜ್ಞಾನ ಜ್ಯೋತಿ ಗೆಳೆಯರ ಬಳಗದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಪಾಪುದಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment