ಮಡಿಕೇರಿ (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ ಭೀತಿ ತೀವ್ರವಾಗಿದ್ದು, ಬಸ್ ಚಾಲಕನೋರ್ವ ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಸನ್ನಿವೇಶ ಮಡಿಕೇರಿಯಲ್ಲಿ ಕಂಡು ಬಂದಿದೆ.
ಕೊರೊನಾ ತೀವ್ರತೆ ಬಗ್ಗೆ ರಾಜ್ಯ ಸರಕಾರ ಈಗಾಗಲೇ ತೀವ್ರ ನಿಗಾ ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಮಡಿಕೇರಿ ಘಟಕದ ಕೆ.ಎಸ್.ಆರ್.ಟಿ.ಸಿ. ಚಾಲಕ ಉಷಾ ಕುಮಾರ್ ಕೊರೊನಾ ಭೀತಿಯಿಂದ ಪಾರಾಗಲು ಮಾಸ್ಕ್ ಖರೀದಿಸಲು ಮುಂದಾದಾಗ ಎಲ್ಲಿಯೂ ಮಾಸ್ಕ್ ದೊರೆತಿಲ್ಲ ಎನ್ನಲಾಗಿದೆ. ಈ ಕಾರಣಕ್ಕಾಗಿ ಈತ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ.
ಕೊಡಗಿನಲ್ಲೂ ಕೊರೊನಾ ವೈರಸ್ ಸೋಂಕಿತ ಶಂಕಿತರು ಪತ್ತೆಯಾಗುತ್ತಿದ್ದಂತೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹೀಗಾಗಿ ಚಾಲಕ ಉಷಾ ಕುಮಾರ್ ಮಾಸ್ಕ್‍ಗಾಗಿ ಮೆಡಿಕಲ್ ಶಾಪ್‍ಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
0 comments:
Post a Comment