ವಿಟ್ಲ (ಕರಾವಳಿ ಟೈಮ್ಸ್) : ಕೊಳ್ನಾಡು ಗ್ರಾಮ ಪಂಚಾಯತ್ ಕಾರ್ಯಪಡೆಯ ವತಿಯಿಂದ ಮಾರ್ಚ್ 31 ರಂದು ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಕೊಳ್ನಾಡು ಗ್ರಾಮ ವ್ಯಾಪ್ತಿಯ ವರ್ತಕರ ಸಭೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ವರ್ತಕರು ಲಾಕ್‍ಡೌನ್ ಸಂದರ್ಭ ಅಗತ್ಯ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಸರಕಾರ ನಿಗದಿ ಪಡಿಸಿದ ದಿನಸಿ ವ್ಯಾಪಾರಕ್ಕೆ ಬಿಡುವಿನ ದಿನ ಹಾಗೂ ಸಮಯದಂದು ಅಂಗಡಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಹಕರು ದೂರವಾಣಿ ಮೂಲಕ ಕರೆಮಾಡಿ ವರ್ತಕರಲ್ಲಿ ಅಹಾರ, ಸಾಮಗ್ರಿಗಳ ಪಟ್ಟಿ ನೀಡುವುದು.
ವರ್ತಕರು ವ್ಯಾಪಾರ ಬಂದ್ ಇರುವ ಸಂದರ್ಭದಲ್ಲಿ ಆಹಾರ ಸಾಮಾನುಗಳನ್ನು ಪ್ಯಾಕ್ ಮಾಡಿ ಬಿಡುವಿನ ಸಂದರ್ಭದಲ್ಲಿ, ಬಿಡುವಿನ ದಿನ ಗ್ರಾಹಕರ ಮನೆ-ಮನೆಗೆ ಸರಬರಾಜು ಮಾಡುವುದು.
ಸರಕಾರ ನಿಗದಿಪಡಿಸಿದ ಬಿಡುವಿನ ದಿನ ಹಾಗೂ ಸಮಯದಲ್ಲಿ ಅಂಗಡಿಗಳಲ್ಲಿ ವ್ಯಾಪಾರ ಕಡಿಮೆ ಮಾಡಿ ಗ್ರಾಹಕರ ಮನೆ-ಮನೆಗೆ ಸರಬರಾಜು ಮಾಡಲು ಆದ್ಯತೆ ನೀಡುವುದು.
ಅಂಗಡಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದೇ ಮತ್ತು ಕನಿಷ್ಠ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡಬಾರದು.
ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪರವಾನಿಗೆ ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು.
ಎಪ್ರಿಲ್ 14ರವರೆಗೆ ವರ್ತಕರು ಗ್ರಾಮ ಪಂಚಾಯತ್‍ಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಲಾಯಿತು.
ಸಭೆಯಲ್ಲಿ ಬಾಗವಹಿಸಿದ ವರ್ತಕರು ಗ್ರಾಮ ಪಂಚಾಯತ್ ನಿರ್ಣಯಿಸಿ ಕೈಗೊಂಡ ನಿಯಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಿ ಸಹಕಾರ ನೀಡುವ ಭರವಸೆ ನೀಡಿದರು.
ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗೆ ಅಗತ್ಯ ವಸ್ತುಗಳಿಗೆ ಪೆÇೀನ್ ಮೂಲಕ ಬೇಡಿಕೆ ಸಲ್ಲಿಸಲು ವರ್ತಕರ ದೂರವಾಣಿ ಸಂಖ್ಯೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಿಸಿ ಅಂಗಡಿಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ಕೋರಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್. ಮುಹಮ್ಮದ್, ಕೊಳ್ನಾಡು ಗ್ರಾಮ ಕರಣಿಕ ಅನಿಲ್ ಕುಮಾರ್, ಪಂಚಾಯತ್ ಕಾರ್ಯಪಡೆಯ ಸದಸ್ಯರು ಭಾಗವಾಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಸ್ವಾಗತಿಸಿ ವಂದಿಸಿದರು.
0 comments:
Post a Comment