ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲೇ ತಾಲೂಕಿನ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ, ಕೃಷಿಕ ಮಾರಪ್ಪ ಗೌಡ ಎಂಬವರಿಗೆ ಸೇರಿದ ಖುಷ್ಕಿ ಜಮೀನಿನಲ್ಲಿದ್ದ ಅಡಿಕೆ ಗಿಡಗಳನ್ನು ಕಿತ್ತೆಸೆದ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ, ಕೊಳ್ನಾಡು ಗ್ರಾಮ ಕರಣಿಕ ಅನಿಲ್ ಹಾಗೂ ಗ್ರಾಮ ಸಹಾಯಕರ ತಂಡ ರಾಕ್ಷಸೀ ಕೃತ್ಯ ಮೆರೆದ ಘಟನೆ ವರದಿಯಾಗಿದೆ.
ಕೊರೋನಾ ಕರ್ಫ್ಯೂ ಜಾರಿಯಲ್ಲಿದ್ದ ಬುಧವಾರ ದಿನ ಕಂದಾಯ ನಿರೀಕ್ಷಕ ದಿವಾಕರ, ಕೊಳ್ನಾಡು ವಿ.ಎ. ಅನಿಲ್ ತಮ್ಮ ಗ್ರಾಮ ಸಹಾಯಕರ ಜೊತೆ ತಾಳಿತ್ತನೂಜಿಗೆ ಆಗಮಿಸಿ ಜಮೀನು ಮಾಲಿಕ ಮಾರಪ್ಪ ಗೌಡರಿಗೆ ಯಾವುದೇ ನೋಟೀಸು ನೀಡದೇ ಏಕಾಏಕಿ ಅಡಿಕೆ ಗಿಡಗಳನ್ನು ಕಿತ್ತೆಸೆದು ರಾಕ್ಷಸೀಕೃತ್ಯ ಮೆರೆದಿದ್ದಾರೆ. ಕಂದಾಯ ಅಧಿಕಾರಿಗಳ ಅಮಾನವೀಯ ಕೃತ್ಯದಿಂದ ಕಂಗೆಟ್ಟ ಗೌಡರ ಪತ್ನಿ, ಪುತ್ರಿ ಮತ್ತು ಗೌಡರು ಕೃಷಿ ನಾಶ ಮಾಡದಂತೆ ಕೈಮುಗಿದು ಕಣ್ಣೀರಿಟ್ಟರೂ ಕಂದಾಯ ಅಧಿಕಾರಿಗಳ ಕಲ್ಲು ಹೃದಯ ಕರಗಿಲ್ಲ.
ಖಾಸಗಿ ವ್ಯಕ್ತಿಯೊಬ್ಬನ ದೂರಿಗೆ ಸಂಬಂಧಿಸಿದಂತೆ ರಾಜಕೀಯ ಪ್ರೇರಿತ ವ್ಯಕ್ತಿಯ ತಾಳಕ್ಕೆ ಹೆಜ್ಜೆಹಾಕಿದ ಆರ್.ಐ. ದಿವಾಕರ, ಕೊಳ್ನಾಡು ವಿ.ಎ. ಅನಿಲ್ ಮತ್ತು ಗ್ರಾಮ ಸಹಾಯಕರುಗಳು ಕೊರೋನಾ ಹೆಮ್ಮಾರಿಯ ಕರ್ಫ್ಯೂ ಸಂಧರ್ಭದಲ್ಲೇ ಇಂತಹ ರಾಕ್ಷಸೀಕೃತ್ಯ ಎಸಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತನ್ನ ಮಕ್ಕಳಂತೆ ಗೌಡರು ಸಾಕಿ ಸಲಹಿದ ಸುಮಾರು 150 ಎಳೆಯ ಅಡಿಕೆ ಗಿಡಗಳನ್ನು ಕಂದಾಯ ಅಧಿಕಾರಿಗಳ ತಂಡ ಕಿತ್ತೆಸೆಯುತ್ತಿದ್ದಂತೆ ಗೌಡರ ಕುಟುಂಬ ಅಸಹಾಯಕರಾಗಿ ಕಣ್ಣೀರಿಡುತ್ತಿದ್ದಾಗ ಸ್ಥಳೀಯ ಯುವಕರು ಆಗಮಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಇದರಿಂದ ಕಂಗಾಲಾದ ಕಂದಾಯ ಅಧಿಕಾರಿಗಳ ತಂಡ ತಮ್ಮ ಕೃತ್ಯವನ್ನು ಮುಚ್ಚಿ ಹಾಕಲು ಸ್ಥಳೀಯರ ವಿರುದ್ಧ ಪೆÇಲೀಸ್ ಠಾಣೆಗೆ ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ. ಕೋವಿಡ್-19 ಬಗ್ಗೆ ಮಾಹಿತಿ ನೀಡಲು ಗ್ರಾಮಕ್ಕೆ ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪ ಮಾಡಿದ ಆರ್.ಐ. ಅವರು ತನ್ನ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಸ್ಥಳೀಯರ ವಿರುದ್ದ ಪೊಲೀಸ್ ದೂರು ನೀಡಿರುವುದು ಇದೀಗ ಬಯಲಾಗಿದೆ.
0 comments:
Post a Comment