ಬಂಟ್ವಾಳ (ಕರಾವಳಿ ಟೈಮ್ಸ್) : ವಿಶ್ವದಾದ್ಯಂತ ಪಸರಿಸಿದ ಕೊರೊನಾ ವೈರಸ್‍ನ್ನು ತಡೆಯುವ ಉದ್ದೇಶದಿಂದ ದೇಶದ ಪ್ರಧಾನಿ ಲಾಕ್‍ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಊಟಕ್ಕೂ ತೊಂದರೆ ಅನುಭವಿಸುತ್ತಿರುವುದರಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಅಕ್ಕಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
367 ವಿದ್ಯಾರ್ಥಿಗಳ ಮನೆಗಳು ಸೇರಿದಂತೆ ಇತರ ಮನೆಗಳಿಗೂ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಯಿತು. ಶ್ರೀರಾಮ ವಿದ್ಯಾಕೇಂದ್ರ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೇ ಅನೇಕ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಸಂಸ್ಥೆಯ ಪ್ರಾರಂಭದಿಂದಲೂ ಮಾಡುತ್ತಾ ಬಂದಿರುತ್ತದೆ. ಅದೇ ರೀತಿ ಈ ತುರ್ತು ಸಂದರ್ಭದಲ್ಲಿಯೂ ವಿದ್ಯಾಕೇಂದ್ರ ಅರ್ಹರಿಗೆ ಸ್ಪಂದಿಸಿದೆ ಎಂದು ವಿದ್ಯಾಕೇಂದ್ರದ ಪ್ರಕಟಣೆ ತಿಳಿಸಿದೆ.
0 comments:
Post a Comment