ಬಂಟ್ವಾಳ (ಕರಾವಳಿ ಟೈಮ್ಸ್) : ವಿಶ್ವವನ್ನೇ ತಲ್ಲಣಗೊಳಿಸಿ ಜನತೆಯನ್ನು ಚಿಂತಕ್ರಾಂತರನ್ನಾಗಿ ಮಾಡಿದ ಕೊರೊನ ವೈರಸ್ ಬಗ್ಗೆ ಗ್ರಾಮಸ್ಥರು ಸರಕಾರದ ಸೂಚನೆಗಳನ್ನು ಪಾಲಿಸಿ ಜಾಗೃತಗೊಳ್ಳುವುದರೊಂದಿಗೆ ವೈಯುಕ್ತಿಕ ಸ್ವಚ್ಚತೆ ಮತ್ತು ಪರಿಸರದ ಸ್ವಚ್ಚತೆಗೂ ಆದ್ಯತೆ ನೀಡುವಂತೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಗ್ರಾಮಸ್ಥರನ್ನು ವಿನಂತಿಸಿಕೊಂಡಿದ್ದಾರೆ.
ಗ್ರಾಮದ ಕಾಪಿಕಾಡು-ಸುವರ್ಣಬೈಲ್‍ನಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ದಲಿತ ಚೋಮ-ನಲಿಕೆಯವರ ವಾಸದ ಮನೆಯ ಸುತ್ತಮುತ್ತ ಕೆಲ ಸ್ನೇಹಿತರೊಂದಿಗೆ ಕೂಡಿಕೊಂಡು ಸ್ವಚ್ಚತೆ ಕಾರ್ಯ ಕೈಗೊಂಡು ಮಾದರಿಯಾದ ಅವರು ಕೆಲ ದಿನಗಳಿಂದ ಉದ್ಯೋಗ ನಿಮಿತ್ತ ವಿದೇಶ ಮತ್ತು ಬೇರೆ ಬೇರೆ ನಗರಗಳಿಗೆ ಹೋಗಿ ಮರಳಿ ಬಂದ ಗ್ರಾಮಸ್ಥರ ಬಗ್ಗೆ ಮಾಹಿತಿ ನೀಡುವ ಮೂಲಕ ಜನರು ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಸಹಕಾರ ಮನೋಭಾವ ತೋರಬೇಕು. ಗ್ರಾಮದ ಜನ ಯಾವುದೇ ಸಮಸ್ಯೆಗಳಿದ್ದಲ್ಲಿ ತನ್ನನ್ನು ಅಥವಾ ಪಂಚಾಯತ್ ಸದಸ್ಯರನ್ನು ಸಂಪರ್ಕಿಸುವಂತೆ ಅಬ್ದುಲ್ ರಝಾಕ್ ಕುಕ್ಕಾಜೆ ತಿಳಿಸಿದ್ದಾರೆ.
0 comments:
Post a Comment