ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಈಗಾಗಲೇ ಲಾಕ್ ಡೌನ್ ಅಸ್ತ್ರ ಪ್ರಯೋಗವಾಗಿದ್ದು, ಹಲವು ಮಂದಿ ಉದ್ಯೋಗಸ್ಥರು ಮನೆಯಲ್ಲೇ ಕುಳಿತು ಡಿಜಿಟಲ್ ವ್ಯವಹಾರ ನಡೆಸುತ್ತಿದ್ದಾರೆ. ಡಿಜಿಟಲ್ ಯುಗ ಆಗಿರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ವರ್ಕ್ ಫ್ರಂ ಹೋಂ ಮಾಡುವಂತೆ ಸರಕಾರ ಕೂಡಾ ಸೂಚಿಸಿತ್ತು.
ಲಾಕ್ ಡೌನ್ ಅವಧಿಯಲ್ಲಿ ಇಂಟರ್ನೆಟ್ ಸೇವೆ ಒದಗಿಸುವ ಟೆಲಿಕಾಂ ಕಂಪನಿಗಳ ಮೇಲೆ ಒತ್ತಡ ಬಹಳಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಸ್ಟ್ರೀಮಿಂಗ್ ಗುಣಮಟ್ಟವನ್ನು ಕಡಿಮೆ ಮಾಡಲು ನಿರ್ಧರಿಸಿಸಲಾಗಿದೆ.
ಮೊಬೈಲ್ ಇಂಟರ್ನೆಟ್ ಬಳಕೆದಾರರಿಗೆ ಎ 14 ರವವರೆಗೆ ಎಚ್‍ಡಿ ಅಥವಾ ಅಲ್ಟ್ರಾ ಎಚ್‍ಡಿ ವಿಡಿಯೋ ಕಂಟೆಟ್ ಬದಲಾಗಿ ಎಸ್‍ಡಿ ಕಂಟೆಂಟ್ ಮಾತ್ರ ಸಿಗಲಿದೆ ಎಂದು ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿ ಹೇಳಿದೆ.
ತಮ್ಮ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಟೆಲಿಕಾಂ ಕಂಪೆನಿಗಳು ವಿಡಿಯೋ ಸ್ಟ್ರೀಮಿಂಗ್ ಸೇವೆ ಒದಗಿಸುವ ಕಂಪೆನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದವು. ಅದರ ಬೆನ್ನಲ್ಲೇ, ಡಿಜಿಟಲ್ ಇಂಡಸ್ಟ್ರಿಯ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು, ಎಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಸೋನಿ, ಗೂಗಲ್, ಫೇಸ್ಬುಕ್, ವಯೋಕಾಮ್, ಅಮೇಜಾನ್ ಪ್ರೈಮ್ ವಿಡಿಯೋ, ಝೀ, ಟಿಕ್‍ಟಾಕ್, ನೆಟ್‍ಫ್ಲಿಕ್ಸ್ ಮತ್ತು ಹಾಟ್‍ಸ್ಟಾರ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಾ 18 ರವರೆಗಿನ ಅಂಕಿಅಂಶಗಳ ಪ್ರಕಾರ, ಒಂದು ವಾರದಲ್ಲೇ ಮೊಬೈಲ್ ಇಂಟರ್ನೆಟ್ ಬಳಕೆ 20 ಶೇ. ಹೆಚ್ಚಾಗಿದೆ. ಲಾಕ್ ಡೌನ್‍ನಿಂದಾಗಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಗೃಹಿಣಿಯರಿಂದ ಹಿಡಿದು ವೃತ್ತಿಪರರರೆಲ್ಲರೂ ಹೆಚ್ಚಿನ ಸಮಯವನ್ನು ಇಂಟರ್ನೆಟ್‍ನಲ್ಲಿ ಕಳೆಯುತ್ತಿದ್ದಾರೆ. ಈ ಹೊಸ ನಿಯಮ ಕೇವಲ ಮೊಬೈಲ್ ಇಂಟರ್ನೆಟ್ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದ್ದು, ಬ್ರಾಡ್‍ಬ್ಯಾಂಡ್ ಸೇವೆಗಳು ಅಭಾದಿತವಾಗಿರಲಿವೆ ಎಂದು ಪ್ರಸಾರ ಭಾರತಿ ಸ್ಪಷ್ಟ ಪಡಿಸಿದೆ.
0 comments:
Post a Comment