ಬಂಟ್ವಾಳ (ಕರಾವಳಿ ಟೈಮ್ಸ್) : ಬಿ ಕಸ್ಬಾ ಗ್ರಾಮದ ಇಜ್ಜಾ ಶಿವಕ್ಷೇತ್ರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ. 27 ರಿಂದ 31ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾ 8 ರಂದು ಸಂಜೆ ಇಜ್ಜ ಶಿವಕ್ಷೇತ್ರದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋದನ್ ಅಚ್ಯುತ ಭಟ್ ಬೀರಮೂಲೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ ನಾವು, ನಮ್ಮದು ಎನ್ನುವ ಭಾವನೆಯೊಂದಿಗೆ ಎಲ್ಲರೂ ಬ್ರಹ್ಮಕಲಶೋತ್ಸವದ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಯಶಸ್ವಿಯಾಗಿ ನಡೆಸಲು ಸಾಧ್ಯವಿದೆ. ಸಮಿತಿ, ಉಪಸಮಿತಿಯ ಪದಾಧಿಕಾರಿಗಳು ಈ ದೇವತಾಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜೇಶ್ ಎನ್. ನೆಕ್ಕರೆ ಮಾತನಾಡಿ ದೇವತಾ ಕಾರ್ಯ ಮಾಡಲು ಇದೊಂದು ಅವಕಾಶ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಭಕ್ತರೆಲ್ಲರೂ ಸ್ವಯಂ ಸೇವಕರಾಗಿ ಶ್ರದ್ಧಾಭಕ್ತಿಯಿಂದ ಬ್ರಹ್ಮಕಲಶೋತ್ಸವದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಧಾನ ಅರ್ಚಕ ಪವಿತ್ರಪಾಣಿ ಸತ್ಯನಾರಾಯಣ ಭಟ್ ಮಾತನಾಡಿ ದೇವರ ಅನುಗ್ರಹದಂತೆ ಕ್ಷೇತ್ರ ಜೀಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ಕಾರ್ಯ ನಡೆಯುತ್ತಿದೆ. ದೇವಸ್ಥಾನದ ನಿರ್ಮಾಣ ಕಾರ್ಯದೊಂದಿಗೆ ಬ್ರಹ್ಮಕಲಶೋತ್ಸವದ ಸಿದ್ದತೆಗಳು ನಡೆಯಬೇಕಾಗಿದ್ದು ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಕುಮಾರ್ ಹೊಸ್ಮಾರ್, ನಾಗೇಶ್ ಸಾಲ್ಯಾನ್ ಬಂಟ್ವಾಳ, ಮುರಳೀಧರ ಭಟ್ ಹಳೇಗೇಟು, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮಲ್ದರ್‍ಗದ್ದೆ, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಗುಂಡಿಕಂಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ದೇವರಗದ್ದೆ, ಜೊತೆ ಕಾರ್ಯದರ್ಶಿಗಳಾದ ಮನೋರಂಜನ್ ಶೆಟ್ಟಿ ದರ್ಬೆ, ದಿನೇಶ್ ಕಾಂಜರ ಕೋಡಿ, ಕೋಶಾಧಿಕಾರಿ ಸುಧೀರ್ ಪರಾಡ್ಕರ್, ಗೌರವ ಸಲಹೆಗಾರರಾದ ಗಂಗಾಧರ ಸಾಮಾನಿ, ದಿನೇಶ್ ಭಂಡಾರಿ ಬಂಟ್ವಾಳ, ಹರೀಶ್ ಕೋಟ್ಯಾನ್ ಕುದನೆ, ಸಂಘಟನಾ ಕಾರ್ಯದರ್ಶಿ ಶೇಖರ ಸಾಲ್ಯಾನ್, ಸುಭಾಶ್ ಕುಲಾಲ್, ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷ ಪುಷ್ಪರಾಜ್ ಭಂಡಾರಿ, ಪ್ರಮುಖರಾದ ಆನಂದ ಆಚಾರ್ಯ ದರ್ಬೆ, ಕೃಷ್ಣಪ್ಪ ನಾಯ್ಕ ದರ್ಬೆ, ಶಾಂತಪ್ಪ ಪೂಜಾರಿ, ಬೊಡಂಗ ಪೂಜಾರಿ, ಹರೀಶ್ ಬೈಪಾಸ್, ಧರ್ಣಪ್ಪ ಪೂಜಾರಿ ರಾಮನಗರ, ಪುರುಷೋತ್ತಮ ಭಟ್, ಗೌರಿ ಅಮ್ಮ, ಪುರುಷೋತ್ತಮ ಕಾಂಜಿರಕೋಡಿ, ಮಹಿಳಾ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಇಜ್ಜಾ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment