ಬಂಟ್ವಾಳ (ಕರಾವಳಿ ಟೈಮ್ಸ್) : ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್-19 ಸೋಂಕಿನ ಭೀತಿಯಿಂದ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆಯು 2020 ಮಾರ್ಚ್ 23 ರಿಂದ 31ರ ವರೆಗೆ ಹೊರಡಿಸಿದ “ಲಾಕ್ ಡೌನ್” ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್ ತಿಳಿಸಿದ್ದಾರೆ.
ದೇಶದಲ್ಲಿ ಕೊರೋನ ಪೀಡಿತರ ಒಟ್ಟು ಸಂಖ್ಯೆ 471ಕ್ಕೇರಿದೆ. ರಾಜ್ಯಾದ್ಯಂತ ಕೊರೋನ ಪೀಡಿತರ ಒಟ್ಟು ಸಂಖ್ಯೆ 30ಕ್ಕೆ ಏರಿಕೆಯಾಗಿದ್ದು. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರಕಾರ ಮತ್ತು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಯಾವುದೇ ಮುಂಜಾಗ್ರತಾ ಆದೇಶಗಳನ್ನು ಹೊರಡಿಸಿದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ.
ರೋಗದ ಲಕ್ಷಣಗಳು ಏನಾದರೂ ಕಂಡು ಬಂದರೆ ದಯವಿಟ್ಟು ಯಾರೂ ಮುಜುಗರಕ್ಕೆ ಒಳಗಾಗದೆ ಪರೀಕ್ಷೆಯನ್ನು ಮಾಡಿಸಿಕೊಳ್ಳಿ, ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಪ್ರತಿಯೊಬ್ಬರ ಮನೆಯಿಂದ ಹೊರಬಾರದಂತೆ ಕಠಿಣ ತೀರ್ಮಾನ ತೆಗೆದುಕೊಳ್ಳಿ, ಮನೆಯಲ್ಲೇ ನಮಾಜನ್ನು ನಿರ್ವಹಿಸಿ, ಆರಾಧನಾ ಕರ್ಮಗಳನ್ನು ಹೆಚ್ಚಿಸಿ, ಈ ಮಹಾಮಾರಿಯಿಂದ ಮುಕ್ತಿ ಲಭಿಸಲು ದೇವರಲ್ಲಿ ಪ್ರಾರ್ಥಿಸ ಬೇಕಾಗಿದೆ.
ರೋಗದ ಬಗ್ಗೆ ಜಾಗೃತರಾಗಿರಿ, ನಿಮ್ಮನ್ನು ನೀವೆ ರಕ್ಷಿಸಿಕೊಳ್ಳಿ- ಕೊರೋನಾ ವೈರಸ್ ನಿಂದ ಸುರಕ್ಷಿತವಾಗಿರಿ ಎಂದು ಹಾಶಿರ್ ಪೇರಿಮಾರ್ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment