ದೇಶದ ಜನರಿಗೆ ಲಾಕ್ ಡೌನ್ ಮೊದಲ ಅನುಭವ... ಸೌಜನ್ಯದಿಂದ, ಸಹಕಾರ ಮನೋಭಾವದಿಂದ ನಿಭಾಯಿಸಿ : ಹನೀಫ್ ಹಾಜಿ - Karavali Times ದೇಶದ ಜನರಿಗೆ ಲಾಕ್ ಡೌನ್ ಮೊದಲ ಅನುಭವ... ಸೌಜನ್ಯದಿಂದ, ಸಹಕಾರ ಮನೋಭಾವದಿಂದ ನಿಭಾಯಿಸಿ : ಹನೀಫ್ ಹಾಜಿ - Karavali Times

728x90

28 March 2020

ದೇಶದ ಜನರಿಗೆ ಲಾಕ್ ಡೌನ್ ಮೊದಲ ಅನುಭವ... ಸೌಜನ್ಯದಿಂದ, ಸಹಕಾರ ಮನೋಭಾವದಿಂದ ನಿಭಾಯಿಸಿ : ಹನೀಫ್ ಹಾಜಿ

ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು


ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್ ಡೌನ್ ಎಂಬುದು ದೇಶದ ಜನರಿಗೆ ಮೊದಲ ಅನುಭವವಾಗಿದೆ. ಚೈನಾ ದೇಶದಲ್ಲಿ ಪರಿಸ್ಥಿತಿ ಹದಗೆಟ್ಟ ಬಳಿಕ ನಾವು ಪಾಠ ಕಲಿಯಬೇಕಿತ್ತು. ಆಗಲೇ ಎಚ್ಚೆತ್ತುಕೊಂಡು ವಿದೇಶಗಳಿಂದ ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಅಂದೇ ಪ್ರತ್ಯೇಕವಾಗಿ ಬಂಧನ ಕೇಂದ್ರದಲ್ಲಿಟ್ಟು ಚಿಕಿತ್ಸೆ ನೀಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ಆದರೆ ಹಾಗೆ ಮಾಡದೆ ಎಲ್ಲರನ್ನೂ ಅವರವರ ಮನೆಗಳಿಗೆ ಕಳುಹಿಸಿದ ಪರಿಣಾಮ ಇಂದು ಮಾರಕ ಸೋಂಕು ದೇಶದ ನಾಗರಿಕ ಸಮಾಜದಲ್ಲಿ ಹರಡಿಯಾಗಿದೆ. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ಲಾಕ್ ಡೌನ್ ಅನುಭವಿಸದೆ ಬೇರೆ ದಾರಿಯಿಲ್ಲ ಎಂದು ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು ಅಭಿಪ್ರಾಯಪಟ್ಟಿದ್ದಾರೆ.

ಲಾಕ್ ಡೌನ್‍ನಿಂದ ದೇಶದಲ್ಲಿ ಸಂಧಿಗ್ಧ ಪರಿಸ್ಥಿತಿ ಇದೆ. ಆದರೆ ಯಾರೂ ಈ ಬಗ್ಗೆ ದೃತಿಗೆಡುವ ಅಗತ್ಯವಿಲ್ಲ. ದೇಶದ ಪ್ರಧಾನಿಗಳು ಘೋಷಿಸಿದ ಲಾಕ್ ಡೌನ್ ನಿಯಮಗಳನ್ನು ಪಾಲಿಸುವ ಮೂಲಕ ಆಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕಾಗಿದೆ. ಸಂಧಿಗ್ಧ ಪರಿಸ್ಥಿತಿಯಲ್ಲಿ ಉಂಟಾಗುವ ಸಂಕಷ್ಟಗಳನ್ನು ಜನ ಪರಸ್ಪರ ಸಹಕಾರ ಹಾಗೂ ಸ್ಪಂದನಾ ಮನೋಭಾವದಿಂದ ಒಗ್ಗಟ್ಟಿನಿಂದ ಬದುಕಬೇಕಾಗಿದೆ. ಸರಕಾರ, ಸಾಮಾಜಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಶಕ್ತಿ ಮೀರಿ ದುಡಿಯುತ್ತಿದ್ದು, ಇವರ ಸೇವೆಯ ಫಲ ಅರ್ಹರಿಗೆ ಸಕಾಲದಲ್ಲಿ ದೊರೆಯುವಂತೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಉಳ್ಳವರು ಸಾಕಷ್ಟು ಸಂಗ್ರಹಿಸಿಕೊಂಡಿದ್ದರೆ, ದಿನಕೂಲಿ ಕಾರ್ಮಿಕರು ಒಪ್ಪೊತ್ತಿನ ಊಟಕ್ಕೂ ತಾತ್ವಾರಪಡಬೇಕಾದ ಸನ್ನಿವೇಶ ಇರಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಸಾಮಾಜಿಕ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದ ಹನೀಫ್ ಹಾಜಿ ಸರಕಾರ ಕಾಲಕಾಲಕ್ಕೆ ನೀಡುವ ಆದೇಶಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕಾಗಿದೆ ಎಂದರು. 
  • Blogger Comments
  • Facebook Comments

0 comments:

Post a Comment

Item Reviewed: ದೇಶದ ಜನರಿಗೆ ಲಾಕ್ ಡೌನ್ ಮೊದಲ ಅನುಭವ... ಸೌಜನ್ಯದಿಂದ, ಸಹಕಾರ ಮನೋಭಾವದಿಂದ ನಿಭಾಯಿಸಿ : ಹನೀಫ್ ಹಾಜಿ Rating: 5 Reviewed By: karavali Times
Scroll to Top