ಹಳೆಯಂಗಡಿ (ಕರಾವಳಿ ಟೈಮ್ಸ್) : ಜಾಗತಿಕವಾಗಿ ಹರಡುತ್ತಿರುವ ಕೊರೊನ ಎಂಬ ಮಹಾ ಮಾರಿಯು ಭಾರತಕ್ಕೆ ಕೂಡಾ ಹರಡಿದ್ದು, ಈಗಾಗಲೇ ಹಲವು ಮಂದಿಯನ್ನು ಬಲಿ ಪಡೆದುಕೊಂಡಿದೆ. ಇಷ್ಟಾಗಿಯೂ ನಾವು ಇನ್ನೂ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಭಾರತದಲ್ಲಿ ಇನ್ನಷ್ಟು ಸಾವು-ನೋವುಗಳನ್ನು ನಾವು ಅನುಭವಿಸಬೇಕಾಗಿ ಬರಬಹುದು.
ಈ ಹಿನ್ನೆಲೆಯಲ್ಲಿ ಹಳೆಯಂಗಡಿಯ ಪಡುಪಣಂಬೂರು ವ್ಯವಸಾಯಿಕ ಸೇವಾ ಸಹಾಕಾರಿ ಬ್ಯಾಂಕಿನ ನ್ಯಾಯ ಬೆಲೆ ಅಂಗಡಿಯಲ್ಲಿ, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾದ ಉತ್ತಮ ಕ್ರಮ ಕೈಗೊಳ್ಳಲಾಗಿದೆ.
ಪಡಿತರ ಸಾಮಾಗ್ರಿಗಳಿಗಾಗಿ ಸರತಿ ಸಾಲಲ್ಲಿ ನಿಂತು ಮುಗಿ ಬೀಳುವ ಗ್ರಾಹಕರ ಹಿತದೃಷ್ಟಿಯಿಂದ ಒಂದು ಮೀಟರ್ ಅಂತರದಲ್ಲಿ ಗುರುತುಗಳನ್ನು ಹಾಕಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುವ ಮೂಲಕ ಸುರಕ್ಷತೆ ಕಾಪಾಡಲಾಗಿದೆ.
ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಮಾತನಾಡಿ ಸರ್ವರ್ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ರೇಷನ್ ವಿತರಣೆ ಮಾಡಲು ಅಸಾಧ್ಯವಾಗುತ್ತಿದೆ, ಆದ್ದರಿಂದ ನಾವು ಒಟಿಪಿ ಮುಖಾಂತರ ಪಡಿತರ ವಿತರಿಸುತ್ತಿದ್ದೇವೆ, ಅದರಲ್ಲೂ ಸಮಸ್ಯೆ ಬಂದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಯಲ್ಲಿ ಬರೆದು ಪಡಿತರ ಅಕ್ಕಿಯನ್ನು ವಿತರಿಸುತ್ತಿದ್ದೇವೆ. ನಿನ್ನೆ ಯುಗಾದಿ ಪ್ರಯುಕ್ತ ಸರಕಾರಿ ರಜೆ ಇದ್ದರೂ ನಾವು ಬೆಳಗ್ಗೆಯಿಂದಲೇ ಅಂಗಡಿ ತೆರೆದು ಸಾರ್ವಜನಿಕರಿಗೆ ರೇಶನ್ ವಿತರಿಸಿದ್ದೇವೆ ಎಂದಿದ್ದಾರೆ. ಸುರಕ್ಷಿತೆ ದೃಷ್ಟಿಯಿಂದ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಬೇಕು, ಹಾಗೂ ನಾವು ಹಾಕಿದ ಗುರುತು ರೇಖೆಯ ಮಿತಿಯಲ್ಲಿ ನಿಂತು ಸಹಕರಿಸಬೇಕೆಂದು ಗ್ರಾಹಕರಿಗೆ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment