ವಿಟ್ಲ (ಕರಾವಳಿ ಟೈಮ್ಸ್) : ಕ್ರೀಡೆಗಳು ವ್ಯಕ್ತಿಯ ದೈಹಿಕ ಸಮತೋಲನಕ್ಕೆ ಹೇಗೆ ಪೂರಕವೋ ಅದೇ ರೀತಿ ಕ್ರೀಡಾಕೂಟಗಳು ಪ್ರೀತಿ-ವಿಶ್ವಾಸ, ಶಾಂತಿ-ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಲು ಪೂರಕವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅನಂತಾಡಿ-ಗೋಳಿಕಟ್ಟೆಯ ಶೈನ್ ಫವಾಝ್ ಕ್ರಿಕೆಟರ್ಸ್ ವತಿಯಿಂದ ಕೊಡಾಜೆ-ಪಂತಡ್ಕದ ಚೋಯಿಸ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಸಮಾರೋಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದ.ಕ. ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಝೀವಲ್ ಖಾನ್, ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅದ್ಯಕ್ಷ ನಾರಾಯಣ ಸಾಲಿಯಾನ್ ಶುಭ ಹಾರೈಕೆಯ ಮಾತುಗಳನ್ನಾಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಅನಂತಾಡಿ ಗ್ರಾ.ಪಂ. ಅದ್ಯಕ್ಷ ಸನತ್ ಕುಮಾರ್ ರೈ, ಯುವ ಮುಂದಾಳು ಪ್ರವೀಣ್ ಕುಮಾರ್ ಶೆಟ್ಟಿ ಕಲ್ಲಾಜೆ, ಉದ್ಯಮಿಗಳಾದ ಸಲೀಂ ಸಕ್ಸಸ್ ಕುಕ್ಕರಬೆಟ್ಟು, ಸಿರಾಜ್ ಕುಕ್ಕರಬೆಟ್ಟು, ಅರವಿಂದ ಕೊಂಡೆ, ಗೋಳಿಕಟ್ಟೆ ಫ್ರೆಂಡ್ಸ್ ಬಳಗದ ಅದ್ಯಕ್ಷ ರಝಾಕ್ ಗುಲ್ಝಾರ್, ನಾಟಿವೈದ್ಯ ಗಂಗಾಧರ ಪಂಡಿತ್ ಗೋಳಿಕಟ್ಟೆ, ನೇರಳಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ವೆಂಕಟೇಶ್ ಕೋಟ್ಯಾನ್, ಬಿಲ್ಡಿಂಗ್ ಕಂಟ್ರಾಕ್ಟರ್ ಸತೀಶ್ ಬಲ್ನಾಡು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ಪ್ರಶಾಂತ್ ಪಚ್ಚು ಗಣೇಶನಗರ, ಹನೀಫ್ ಮಿತ್ತೂರು, ಸತ್ತಾರ್ ಒಕ್ಕೆತ್ತೂರು, ರಫೀಕ್ ಪಂತಡ್ಕ, ಹಮೀದ್ ಪಂತಡ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಪಿ.ಕೆ. ರಶೀದ್ ಪರ್ಲೊಟ್ಟು, ಶಮ್ಮಾಸ್ ನೇರಳಕಟ್ಟೆ, ನವಾಝ್ ಕೊಡಾಜೆ, ಝುಬೈರ್ ಪರ್ಲೊಟ್ಟು, ಮನ್ಸೂರ್ ಪಂತಡ್ಕ, ಫಾರೂಕ್ ಕೊಡಾಜೆ, ಮಚ್ಚಾಸ್ ತಂಡದ ಮಾಲಕ ಅಶ್ರಫ್ ಕೊಡಾಜೆ ಆದಂ ಎಸ್.ಎಂ.ಎಸ್, ಫಾರೂಕ್ ಆರಂಗಳ, ಅದ್ನಾನ್ ಪಂತಡ್ಕ, ರಾಧಿಕಾ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು. ಶೈನ್ ಫವಾಝ್ ಕ್ರಿಕೆಟರ್ಸ್ ಅದ್ಯಕ್ಷ ಫಾರೂಕ್ ಗೋಳಿಕಟ್ಟೆ ಸ್ವಾಗತಿಸಿ, ಇಸ್ಮಾಯಿಲ್ ಅನಂತಾಡಿ ವಂದಿಸಿದರು ಶಾಕಿರ್ ಕೆಂಪುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment