ವಿಟ್ಲ (ಕರಾವಳಿ ಟೈಮ್ಸ್) : ಮಾಣಿ ಸಮೀಪದ ಗಡಿಯಾರ ಬೋಫೋರ್ಸ್ ಕ್ರಿಕೆಟರ್ಸ್ ಇದರ ಆಶ್ರಯದಲ್ಲಿ ಮಾಣಿ ಗಾಂಧಿ ಮೈದಾನದಲ್ಲಿ ಮೂರು ದಿವಸ ನಡೆದ 8 ತಂಡಗಳ ಗಡಿಯಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ
‘’ಬೋಫೋರ್ಸ್ ಟ್ರೋಫಿ-2020'’ಯನ್ನು ನ್ಯೂ ಸ್ಟಾರ್ ಸಲೀಂ ಮಾಣಿ ಮಾಲಕತ್ವದ ಕೆ.ಜಿ.ಎಫ್. ಮಾಣಿ ತಂಡವು ಗೆದ್ದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ನೌಫಲ್ ಪೇರಮುಗೇರ್ ಮಾಲೀಕತ್ವದ ಬ್ರದರ್ಸ್ ಇಲೆವನ್ ತಂಡವು ಪಡೆದುಕೊಂಡಿದೆ.
ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ರಾಜೇಶ್ ಉಪ್ಪಿನಂಗಡಿ, ಉತ್ತಮ ಎಸೆತಗಾರ ಬಶೀರ್ ನೇರಳಕಟ್ಟೆ, ಉತ್ತಮ ಹೊಡೆತಗಾರ ಇರ್ಶಾದ್ ಮಾಣಿ, ಉತ್ತಮ ಕ್ಷೇತ್ರ ರಕ್ಷಕ ಶಾನಿದ್ ಪೇರಮುಗೇರ್, ಉತ್ತಮ ಗೂಟ ರಕ್ಷಕ ಪ್ರಶಸ್ತಿಯನ್ನು ಅತಾವುಲ್ಲಾ ಪೆರ್ನೆ ಅವರು ಪಡೆದುಕೊಂಡರು.
ಪಂದ್ಯಾಟವನ್ನು ಉದ್ಯಮಿ ಜಿ.ಎಂ.ಆರ್. ರಫೀಕ್ ಗಡಿಯಾರ ಉದ್ಘಾಟಿಸಿದರು. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಕೆಂಪಿ ಉಪ್ಪಿನಂಗಡಿ ಅದ್ಯಕ್ಷತೆ ವಹಿಸಿದ್ದರು. ಮಾಣಿ ವಲಯ ಯುವ ಕಾಂಗ್ರೆಸ್ ಅದ್ಯಕ್ಷ ವಿಕೇಶ್ ಶೆಟ್ಟಿ, ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಲತೀಫ್ ನೇರಳಕಟ್ಟೆ, ಉದ್ಯಮಿಗಳಾದ ರಶೀದ್ ನೀರಪಾದೆ, ಫಾರೂಕ್ ಕಲ್ಲಾಜೆ, ಸಲೀಂ ಕೆಮ್ಮಾನ್, ಮೂಸಾ ಕರೀಂ ಮಾಣಿ, ಮಜೀದ್ ಮಾಣಿ, ಹನೀಫ್ ಸೆಂಟ್ರಲ್ ಪೆರ್ನೆ, ರಫೀಕ್ ಕೆಮ್ಮಾನ್, ಹಮೀದ್ ಇನಾಮ್ ಮಾಣಿ, ಸಲೀಂ ಮಾಣಿ, ಇಮ್ರಾನ್ ಉಪ್ಪಿನಂಗಡಿ, ಸಿದ್ದೀಕ್ ಬಿಲಾಲ್ ಕರುವೇಲು, ಅಝೀಝ್ ಗಡಿಯಾರ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಬೋಫೆÇೀರ್ಸ್ ಕ್ರಿಕೆಟರ್ಸ್ ಪ್ರಮುಖರಾದ ಸಫ್ವಾನ್ ಗಡಿಯಾರ, ಶಾಕಿರ್, ರವೂಫ್, ಇಮ್ತಿಯಾಝ್, ಸಿನಾನ್ ಬುಡೋಳಿ, ಆಸಿರ್ ಗಡಿಯಾರ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆಗೈದ ಅಬ್ದುಲ್ ರಝಾಕ್ ಕೋರ್ಯ, ಬದ್ರುದ್ದೀನ್ ನೇರಳಕಟ್ಟೆ, ರಾಜೇಶ್ ಉಪ್ಪಿನಂಗಡಿ ಹಾಗೂ ಹಾರೂನ್ ಮಾಣಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅದ್ಯಕ್ಷ ಉನೈಸ್ ಸ್ವಾಗತಿಸಿ, ವಂದಿಸಿದರು. ಅಝರ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment