ಆಧಾರ್-ಪಾನ್ ಲಿಂಕ್ ಅವಧಿಕ ಜೂ 30ರವರೆಗೆ ವಿಸ್ತರಣೆ
ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಂಡಿಶನ್ ಇಲ್ಲ
ನವದೆಹಲಿ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಭಾರತದ ಅರ್ಥ ವ್ಯವಸ್ಥೆಗೆ ಭಾರೀ ಹೊಡೆತವನ್ನು ನೀಡಿದ್ದು, ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿದೆ. ಜನಸಾಮಾನ್ಯರು ಇದರ ಅಡ್ಡ ಪರಿಣಾಮ ಎದುರಿಸುತ್ತಿದ್ದಾರೆ. ಈ ಎಲ್ಲ ಹಿನ್ನಲೆಯಲಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜನಹಿತಕ್ಕಾಗಿ ಹಲವು ಪ್ಯಾಕೇಜ್‍ಗಳನ್ನು ಇಂದು ಘೋಷಿಸಿದ್ದಾರೆ. ಈ ಎಲ್ಲ ಘೋಷಣೆಗಳು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ.
ಜನ ಸಾಮಾನ್ಯರ ಅನುಕೂಲಕ್ಕಾಗಿ ನಾಲ್ಕು ಘೋಷಣೆಗಳು
1. ಮುಂದಿನ ಮೂರು ತಿಂಗಳು ಯಾವುದೇ ಎಟಿಎಂನಿಂದ ಹಣ ಡ್ರಾ ಮೇಲೆ ಸೇವಾ ಶುಲ್ಕ ಇರುವುದಿಲ್ಲ.
2. ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲ.
3. ಐಟಿ ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಣೆ
4. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳುವ ಅವಧಿ ಜೂನ್ 30ರವರೆಗೆ ವಿಸ್ತರಣೆ.
ಉದ್ಯೋಗಿ, ಉದ್ಯಮಿಗಳಿಗೆ ಕೆಲ ಘೋಷಣೆ
1. ಟಿಡಿಎಸ್ ಪಾವತಿ ವಿಳಂಬ ಮೇಲಿನ ಬಡ್ಡಿಯನ್ನು ಶೇ. 12 ರಿಂದ ಶೇ.9ಕ್ಕೆ ಇಳಿಕೆ.
2. 2018-19 ಆರ್ಥಿಕ ವರ್ಷದ ಇನ್‍ಕಂ ಟ್ಯಾಕ್ಸ್ ಫೈಲ್ ಮಾಡಲು ಜೂನ್ 30ರವರೆಗೆ ಅವಕಾಶ.
3. ವಿವಾದ್ ಸೇ ವಿಶ್ವಾಸ್ ಯೋಜನೆ ಮತ್ತು ಆಧಾರ್-ಪ್ಯಾನ್ ಲಿಂಕ್ ಮಾಡುವ ದಿನಾಂಕ ಜೂನ್ 30ರವರೆಗೆ ವಿಸ್ತರಣೆ.
4. 5 ಕೋಟಿ ರೂಪಾಯಿಗೂ ಕಡಿಮೆ ಟರ್ನ್ ಓವರ್ ಹೊಂದಿರುವ ಕಂಪನಿಗಳಿಗೆ ತಡವಾಗಿ ಮಾಡುವ ಜಿಎಸ್‍ಟಿ ಫೈಲಿಂಗ್ ಮೇಲೆ ವಿಧಿಸಲಾಗುವ ಬಡ್ಡಿ, ದಂಡ ಮತ್ತು ಲೇಟ್ ಫೀಸ್ ಗಳಿಂದ ವಿನಾಯ್ತಿ. ಮಾರ್ಚ್-ಏಪ್ರಿಲ್-ಮೇ ಫೈಲಿಂಗ್ ಮಾಡಲು ಜೂನ್ 30ರವರೆಗೆ ಅವಕಾಶ.
5. ರಫ್ತು ಮತ್ತು ಆಮದು ವ್ಯವಹಾರಗಳಲ್ಲಿ ಸರಳೀಕರಣ ಮತ್ತು ಪರಿಹಾರ. ಕಸ್ಟಮ್ ಕ್ಲಿಯರೆನ್ಸ್ ಸೇರಿದಂತೆ ಹಲವು ಸೇವೆಗಳು ಜೂನ್ 30ರವರೆಗೆ ಲಭ್ಯ. ಈ ಸಂಬಂಧ 24 ಗಂಟೆಯೂ ಕಾರ್ಯನಿರ್ವಹಣೆ.
6. ಕಂಪೆನಿಯ ನಿರ್ದೇಶಕರು 182 ದಿನ ದೇಶದಲ್ಲಿ ಇರಬೇಕಾದ ಅನಿವಾರ್ಯತೆಯಿಂದ ಮುಕ್ತ.
7. ಒಂದು ಕೋಟಿ ರೂಪಾಯಿಗಿಂತಲೂ ಕಡಿಮೆ ವ್ಯವಹಾರ ನಡೆಸುವ ಕಂಪನಿಗಳ ವಿರುದ್ದ ದಿವಾಳಿ ಪ್ರಕಿಯೆ ಆರಂಭಿಸಲ್ಲ.
ಕೊರೊನಾ ವೈರಸ್ ಹರಡುವ ಮೊದಲೇ ಭಾರತದ ಆರ್ಥಿಕ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳು ಸ್ತಬ್ಧಗೊಂಡಿದ್ದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಅಡ್ಡ ಪರಿಣಾಮ ಬೀರಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಈ ಪ್ಯಾಕೇಜ್‍ಗಳನ್ನು ಘೋಷಿಸಿದ್ದಾರೆ.
0 comments:
Post a Comment