ಪುತ್ತೂರು (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ವಿಷಯದಲ್ಲಿ ಮಾಹಿತಿ ಶಿಬಿರ ಇತ್ತೀಚೆಗೆ ತ್ವೈಭಾ ಎಜುಕೇಶನ್ ಸೆಂಟರಿನಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷ ಅಬೂಬಕ್ಕರ್ ಲತೀಫ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರಮಂಗಲ ಪೆÇೀಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಸುರೇಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಅಡ್ವೊಕೇಟ್ ಲುಕ್ಮಾನ್ ಮಂಗಳೂರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ಪೊಲೀಸ್ ಅಧಿಕಾರಿ ಸುರೇಶ್ ರೈ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸೆಕ್ಟರ್ ಕೋಶಾಧಿಕಾರಿ ಸಂಶುದ್ದೀನ್ ಹನೀಫಿ ಮೀನಾವು, ತ್ವೈಭಾ ಮುದರ್ರಿಸ್ ದಾವೂದುಲ್ ಹಕೀಂ ಹಿಮಮಿ ಸಖಾಫಿ, ಎಸ್.ವೈ.ಎಸ್. ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ಕೊಯಿಲ, ಅಬ್ದುಲ್ಲ ಮೆನಸಿನಕಾನ, ತ್ವಾಹ ಸಅದಿ, ಲತೀಫ್ ಮುಸ್ಲಿಯಾರ್, ಸ್ವಾಲಿಹ್ ಸಖಾಫಿ, ಶಿಹಾಬುದ್ದೀನ್ ಸಖಾಫಿ, ಹುಸೈನ್ ಜೌಹರಿ, ಶಫೀಕ್ ಸಅದಿ, ಇರ್ಫಾನ್ ಮಾಡನ್ನೂರ್, ನೌಫಾನ್ ಕಾವು ಮೊದಲಾದವರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕುಕ್ಕಾಜೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸಾದಿಕ್ ಇಮ್ದಾದಿ ಮೇನಾಲ ವಂದಿಸಿದರು.
0 comments:
Post a Comment