ತುರ್ತು ಸೇವೆಗಳಿಗಾಗಿ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಇ-ಪಾಸ್ ವಿತರಣೆಗೆ ಕ್ರಮ - Karavali Times ತುರ್ತು ಸೇವೆಗಳಿಗಾಗಿ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಇ-ಪಾಸ್ ವಿತರಣೆಗೆ ಕ್ರಮ - Karavali Times

728x90

29 March 2020

ತುರ್ತು ಸೇವೆಗಳಿಗಾಗಿ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಇ-ಪಾಸ್ ವಿತರಣೆಗೆ ಕ್ರಮ



ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡಚನೆಯಾಗುವುದನ್ನು ತಪ್ಪಿಸಲು ಈ ಕೆಳಗೆ ನಮೂದಿಸಿರುವ ಸಂಸ್ಥೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಪಾಸ್ ವಿತರಿಸಲಾಗುತ್ತಿದ್ದು ಪಾಸ್‍ಗಾಗಿ ಆನ್ ಲೈನ್ ಪೆÇೀರ್ಟಲ್ (https://bit.ly/dkdpermit) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

* ಎನ್.ಎಂ.ಪಿ.ಟಿ. ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿಗಳು

* ಖಾಸಗಿ ಸೆಕ್ಯುರಿಟಿ ಗಾರ್ಡ್, ಪೆಟ್ರೋಲ್-ಗ್ಯಾಸ್ ಎಲ್.ಪಿ.ಜಿ. ರಿಟೈಲರ್

* ಬ್ಯಾಂಕ್, ಎಟಿಎಂ, ವಿಮಾ ಕಂಪನಿಯ ನೌಕರರು

* ಅಹಾರ ಪದಾರ್ಥಗಳ ಹೋಮ್ ಡೆಲಿವರಿ ಏಜೆಂಟ್

* ಅನ್ ಲೈನ್ ಔಷದಿಗಳ ಕಂಪೆನಿಗಳು, ಈ-ಕಾಮರ್ಸ್ ಪ್ಲಾಟ್ ಪಾರಂ

* ಅಹಾರ ಪಡಿತರ ಅಥವಾ ದಿನಸಿ ಅಂಗಡಿಗಳು, ಹಣ್ಣು ಹಂಪಲು, ತರಕಾರಿ ಅಂಗಡಿಗಳು, ಹಾಲಿನ ಡೈರಿ, ಮಾಂಸ ಮತ್ತು ಮೀನಿನ ಅಂಗಡಿಗಳು, ಪ್ರಾಣಿಗಳ ಮೇವು ಅಂಗಡಿಯ ನೌಕರರು.

* ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಸ್ಟೋರ್, ನರ್ಸಿಂಗ್ ಹೋಂ, ಲ್ಯಾಬ್, ಅಂಬ್ಯುಲೆನ್ಸ್ ಸೇವೆಗಳು ಇತ್ಯಾದಿ ವೈದ್ಯಕೀಯ ಸೇವೆಗಳ ಸಿಬ್ಬಂದಿಗಳು.

* ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆಗಳ ಸಿಬ್ಬಂದಿಗಳು, ಮಾಹಿತಿ ತಂತ್ರಜ್ಞಾನ ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಮಾಹಿತಿ ತಂತ್ರಜ್ಞಾನದ ಸಕ್ರಿಯಗೊಳಿಸಿದ ಸೇವೆಗಳ ಸಿಬ್ಬಂದಿಗಳು.

* ಶಕ್ತಿ ಉತ್ಪಾದನೆ ಪ್ರಸಾರಣೆ ಮತ್ತು ವಿತರಣಾ ಘಟಕಗಳ ಸಿಬ್ಬಂದಿಗಳು.

* ಕೋಲ್ಡ್ ಸ್ಟೋರೇಜ್ ಗೋದಾಮು ಸೇವೆಗಳ ನೌಕರರು

* ಅಗತ್ಯವಸ್ತುಗಳ ಉತ್ಪಾದನಾ ಘಟಕಗಳ ನೌಕರರು, ಅಗತ್ಯ ಸರಕುಗಳ ಸಾಗಣೆಯಲ್ಲಿ ತೊಡಗಿರುವ ನೌಕರರು

* ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮೀಡಿಯಾ ಸಿಬ್ಬಂದಿಗಳು ಸೇರಿದಂತೆ ಇತರೆ ಜೀವನಾವಶ್ಯಕ ವ್ಯವಸ್ಥೆಗಳ ಪೂರೈಕೆಯಲ್ಲಿ ನಿರತರಾಗಿರುವವರು.
  • Blogger Comments
  • Facebook Comments

0 comments:

Post a Comment

Item Reviewed: ತುರ್ತು ಸೇವೆಗಳಿಗಾಗಿ ಜಿಲ್ಲಾಡಳಿತದಿಂದ ಆನ್‍ಲೈನ್ ಮೂಲಕ ಇ-ಪಾಸ್ ವಿತರಣೆಗೆ ಕ್ರಮ Rating: 5 Reviewed By: karavali Times
Scroll to Top