ವಿಟ್ಲ (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ದಾರಿಮೀಸ್ ಇದರ 18ನೇ ವಾರ್ಷಿಕೋತ್ಸವದ ಪ್ರಯುಕ್ತ ಫಿಖ್ಹ್ ಸೆಮಿನಾರ್ ಮತ್ತು ಶಂಸುಲ್ ಉಲಮಾ ಆಂಡ್ ನೇರ್ಚೆಯು ಮಾಣಿ ಕೊಡಾಜೆಯ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಶೈಖುನಾ ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಂಇಯ್ಯತುಲ್ ಉಲಮಾ ಕಾರ್ಯಾಧ್ಯಕ್ಷ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕೆ.ಕೆ. ಮಾಹಿನ್ ಉಸ್ತಾದ್ ತೊಟ್ಟಿ, ಅಬ್ದುಲ್ ಖಾದಿರ್ ಅಲ್-ಖಾಸಿಮಿ ಬಂಬ್ರಾಣ, ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್, ದಾರಿಮೀಸ್ ರಾಜ್ಯಾಧ್ಯಕ್ಷ ಎಸ್.ಬಿ. ದಾರಿಮಿ, ದಾರಿಮೀಸ್ ರಾಜ್ಯ ಕಾರ್ಯದರ್ಶಿ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿದರು. ಶುಹೈಬ್ ದಾರಿಮಿ ಹೈತಮಿ ಕೇರಳ ಅವರು ಫಿಖ್ಹ್ ಸೆಮಿನಾರ್ ನಡೆಸಿಕೊಟ್ಟರು.
ಪಿ.ಕೆ. ಆದಂ ದಾರಿಮಿ ಕೊಡಾಜೆ, ಹುಸೈನ್ ದಾರಿಮಿ ರೆಂಜಲಾಡಿ, ಮಾಹಿನ್ ದಾರಿಮಿ ಪಾತೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಇಬ್ರಾಹಿಂ ರಾಜ್ ಕಮಲ್, ರಫೀಕ್ ಹಾಜಿ ಸುಲ್ತಾನ್, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ. ದಾರಿಮಿ ಕೊಡುಂಗಾಯಿ ಸ್ವಾಗತಿಸಿ, ಜಿಲ್ಲಾ ದಾರಿಮೀಸ್ ಕೋಶಾಧಿಕಾರಿ ಅಬ್ದುಲ್ ಕರೀಂ ದಾರಿಮಿ ಸಂಪ್ಯ ಖಿರಾಅತ್ ಪಠಿಸಿದರು. ಹನೀಫ್ ದಾರಿಮಿ ನೆಕ್ಕಿಲಾಡಿ ವಂದಿಸಿದರು. ಜಿಲ್ಲಾ ದಾರಿಮೀಸ್ ಕಾರ್ಯದರ್ಶಿ ಕೆ.ವಿ. ಮಜೀದ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment