ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಗೃಹಬಂಧನ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ 30 ಸೋಮವಾರ ಕೂಡಾ ಪೂರ್ಣ ಬಂದ್ ಘೋಷಿಸಲಾಗಿದ್ದು, ಮಾ 31 ರಂದು ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆವರೆಗೆ ದಿನಸಿ ಸಾಮಾಗ್ರಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಘೋಷಣೆಯಂತೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಜಿಲ್ಲೆಯಲ್ಲಿ ಸೆಕ್ಷನ್ 144 ಮುಂದುವರಿಯಲಿದ್ದು, ಅಂಗಡಿ ತೆರೆಯುವ ವೇಳೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಲೇ ಅಗತ್ಯ ಸಾಮಾಗ್ರಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಎಪ್ರಿಲ್ 2 ರಿಂದ ಎರಡು ತಿಂಗಳ ಪಡಿತರ ಸಾಮಾಗ್ರಿ ವಿತರಿಸಲು ಸೂಚಿಸಲಾಗಿದೆ.
0 comments:
Post a Comment