ಬಂಟ್ವಾಳ (ಕರಾವಳಿ ಟೈಮ್ಸ್) : ಸತತ ಸ್ತಬ್ದತೆಯ ಬಳಿಕ ಮಂಗಳವಾರ ಕಫ್ಯ್ಯೂ ಸಡಿಲಿಕೆಯಿಂದಾಗಿ ಬೆಳಗ್ಗಿನಿಂದಲೇ ಜನ ಹಾಗೂ ವಾಹನ ಜಂಜಾಟ ಉಂಟಾಗಿದೆ. ಕೇವಲ ದಿನಸಿ ಅಂಗಡಿ ಹಾಗೂ ಅಗತ್ಯ ಸೇವೆಗಳಿಗೆ ಮಾತ್ರ ನಿರ್ಬಂಧ ಸಡಿಲಿಕೆ ಎಂಬ ಸ್ಪಷ್ಟ ಸಂದೇಶ ಸರಕಾರ ನೀಡಿದ್ದರೂ ಜನ ಮಾತ್ರ ಬೇಕಾಬಿಟ್ಟಿ ಸಂಚಾರ ನಡೆಸಿದ ಪರಿಣಾಮ ಎಲ್ಲಾ ಪೇಟೆ-ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಲ್ಲೂ ಜನಜಂಗುಳಿ ನಿರ್ಮಾಣವಾಗಿದೆ. ಕರ್ಫ್ಯು ಸಂದರ್ಭ ಖಾಲಿ ಜಾಗದಲ್ಲೂ ಬೇಕಾಬಿಟ್ಟಿ ದಂಡಪ್ರಯೋಗ ಮಾಡುತ್ತಿದ್ದ ಅಧಿಕಾರಿಗಳು ಮೌನವಾಗಿದ್ದು ಜನ ನಿಯಂತ್ರಣ ಇಲ್ಲದೆ ಸುತ್ತಾಡುವಂತಾಗಿದೆ. ತಕ್ಷಣ ಸಚಿವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಹತ್ತು ದಿನಗಳ ಕಾಲ ಅನುಭವಿಸಿದ ವನವಾಸ ನೀರಿನಲ್ಲಿಟ್ಟ ಹೋಮದಂತಾಗುವುದಂತೂ ಸ್ಪಷ್ಟ ಎಂಬ ಅಭಿಪ್ರಾಯ ನಾಗರಿಕ ಸಮಾಜದಿಂದ ಕೇಳಿ ಬರುತ್ತಿದೆ.
ಕರ್ಫ್ಯೂಗೆ ಇದ್ದ ನಿರ್ಬಂಧ ಸಡಿಲಿಕೆಗೆ ಇಲ್ಲವಾಯಿತೇ : ಅಧಿಕಾರಿಗಳ ಕ್ರಮಕ್ಕೆ ಪ್ರಜ್ಞಾವಂತರ ಆಕ್ರೋಶ
ಬಂಟ್ವಾಳ (ಕರಾವಳಿ ಟೈಮ್ಸ್) : ಸತತ ಸ್ತಬ್ದತೆಯ ಬಳಿಕ ಮಂಗಳವಾರ ಕಫ್ಯ್ಯೂ ಸಡಿಲಿಕೆಯಿಂದಾಗಿ ಬೆಳಗ್ಗಿನಿಂದಲೇ ಜನ ಹಾಗೂ ವಾಹನ ಜಂಜಾಟ ಉಂಟಾಗಿದೆ. ಕೇವಲ ದಿನಸಿ ಅಂಗಡಿ ಹಾಗೂ ಅಗತ್ಯ ಸೇವೆಗಳಿಗೆ ಮಾತ್ರ ನಿರ್ಬಂಧ ಸಡಿಲಿಕೆ ಎಂಬ ಸ್ಪಷ್ಟ ಸಂದೇಶ ಸರಕಾರ ನೀಡಿದ್ದರೂ ಜನ ಮಾತ್ರ ಬೇಕಾಬಿಟ್ಟಿ ಸಂಚಾರ ನಡೆಸಿದ ಪರಿಣಾಮ ಎಲ್ಲಾ ಪೇಟೆ-ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಲ್ಲೂ ಜನಜಂಗುಳಿ ನಿರ್ಮಾಣವಾಗಿದೆ. ಕರ್ಫ್ಯು ಸಂದರ್ಭ ಖಾಲಿ ಜಾಗದಲ್ಲೂ ಬೇಕಾಬಿಟ್ಟಿ ದಂಡಪ್ರಯೋಗ ಮಾಡುತ್ತಿದ್ದ ಅಧಿಕಾರಿಗಳು ಮೌನವಾಗಿದ್ದು ಜನ ನಿಯಂತ್ರಣ ಇಲ್ಲದೆ ಸುತ್ತಾಡುವಂತಾಗಿದೆ. ತಕ್ಷಣ ಸಚಿವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಹತ್ತು ದಿನಗಳ ಕಾಲ ಅನುಭವಿಸಿದ ವನವಾಸ ನೀರಿನಲ್ಲಿಟ್ಟ ಹೋಮದಂತಾಗುವುದಂತೂ ಸ್ಪಷ್ಟ ಎಂಬ ಅಭಿಪ್ರಾಯ ನಾಗರಿಕ ಸಮಾಜದಿಂದ ಕೇಳಿ ಬರುತ್ತಿದೆ.
0 comments:
Post a Comment