ಕರಾವಳಿಯಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 5ಕ್ಕೆ
ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ಕು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 6ಕ್ಕೇರಿದಂತಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಭಟ್ಕಳ ಮೂಲದ 22 ವರ್ಷದ ವ್ಯಕ್ತಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಒಂದೇ ದಿನ ನಾಲ್ಕು ಕೊರೊನಾ ಪ್ರಕರಣಗಳು ಪಾಸಿಟಿವ್ ಬಂದಿವೆ. ಇಂದು ಪಾಸಿಟಿವ್ ಬಂದ 4 ಜನರಲ್ಲಿ ಮೂವರು ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ಜೊತೆಯಲ್ಲಿ ಒಂದೇ ವಿಮಾನದಲ್ಲಿ ಬಂದವರಾಗಿದ್ದಾರೆ. ಇದರ ಜೊತೆ ಮಾರ್ಚ್ 19ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿದ್ದ ಓರ್ವನಿಗೂ ಸೋಂಕು ಪತ್ತೆಯಾಗಿದೆ.
ಮಾರ್ಚ್ 20ರಂದು ದುಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಮೂವರು ಬಂದಿದ್ದಾರೆ. ಈ ಮೂವರಲ್ಲಿ ಮೊದಲಿಗೆ ಭಟ್ಕಳ ಮೂಲದ ವ್ಯಕ್ತಿಗೆ ಸೋಂಕು ಪತ್ತೆಯಾಗಿತ್ತು. ನಂತರ ಇಂದು ಅವರ ಜೊತೆ ಬಂದ ಮೂವರಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಮೂವರನ್ನು ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೊತ್ತೋರ್ವ ಸೋಂಕಿತ ರೋಗಿಗೆ ಕೆಂಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಪಾಸಿಟಿವ್ ಬಂದಿರುವ ನಾಲ್ಕು ಪ್ರಕರಣದಲ್ಲಿ ಎಲ್ಲಾ ಸೋಂಕಿತರು ಕೇರಳ ಮೂಲದವರಾಗಿದ್ದು, ಇವರಲ್ಲಿ ಓರ್ವ ಮಹಿಳೆ ಹಾಗೂ ಮೂರು ಮಂದಿ ಪುರುಷರಾಗಿದ್ದಾರೆ. ಸೋಂಕಿತ ಮಹಿಳೆಗೆ 70 ವರ್ಷ ಪ್ರಾಯ ಹಾಗೂ ಪುರುಷರಿಗೆ ಕ್ರಮವಾಗಿ 32, 47 ಮತ್ತು 23 ವರ್ಷ ಪ್ರಾಯವಾಗಿದೆ.
0 comments:
Post a Comment