ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ಭೀತಿ ಎಲ್ಲಾ ಕ್ಷೇತ್ರಗಳಿಗೂ ತಟ್ಟಿದಂತೆ ಇದೀಗ ರಾಜ್ಯದ ಮೃಗಾಲಯಗಳಿಗೂ ತಟ್ಟಿದೆ. ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲ ಮೃಗಾಲಯಗಳನ್ನು ಮಾರ್ಚ್ 23 ರವರೆಗೆ ಮುಚ್ಚಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.
ಮೃಗಾಲಯ ಪ್ರಾಧಿಕಾರದ ನಿರ್ಧಾರದಿಂದ ಮೈಸೂರು, ಬನ್ನೇರಘಟ್ಟ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಹಂಪಿ ಮತ್ತು ಅನಗೋಡು ಮೃಗಾಲಯಗಳಲ್ಲಿ ಪ್ರವಾಸಿಗರಿಗೆ ಭಾನುವಾರದಿಂದಲೇ ಪ್ರವೇಶಾವಕಾಶ ನಿರಾಕರಿಸಲಾಗಿದೆ ಎಂದು ಪ್ರಾಧಿಕಾರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment