ಕೊರೋನ ವೈರಸ್ ವಿರುದ್ಧ ಕೇರಳ ಮಾದರಿಯಲ್ಲಿ ಕ್ರಮಕೈಗೊಳ್ಳಲು ಡಿ.ವೈ.ಎಫ್.ಐ ಆಗ್ರಹ - Karavali Times ಕೊರೋನ ವೈರಸ್ ವಿರುದ್ಧ ಕೇರಳ ಮಾದರಿಯಲ್ಲಿ ಕ್ರಮಕೈಗೊಳ್ಳಲು ಡಿ.ವೈ.ಎಫ್.ಐ ಆಗ್ರಹ - Karavali Times

728x90

21 March 2020

ಕೊರೋನ ವೈರಸ್ ವಿರುದ್ಧ ಕೇರಳ ಮಾದರಿಯಲ್ಲಿ ಕ್ರಮಕೈಗೊಳ್ಳಲು ಡಿ.ವೈ.ಎಫ್.ಐ ಆಗ್ರಹ

       


ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರು ಭಯ ಬೀತಿಗೊಳಗಾಗಿದ್ದಾರೆ. ಈ ಬಗ್ಗೆ ಸರಕಾರವು ಕೇರಳ ಮಾದರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಿ ವೈ ಎಫ್‌ ಐ ಬಂಟ್ವಾಳ ತಾಲೂಕು ಸಮಿತಿ ಆಗ್ರಹಿಸಿದೆ.

  ಕೇರಳ ಸರಕಾರವು ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಕರ್ನಾಟಕ ಸರಕಾರವು ಕೇರಳ ಮಾದರಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಹಾಗೂ ವಿಶೇಷವಾಗಿ ನೆಗಡಿ, ಜ್ವರ, ಕೆಮ್ಮು ಇತ್ಯಾದಿ ಲಕ್ಷಣಗಳಿರುವವರನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಬೇಕು.

ಉಚಿತ ತಪಾಸಣೆ ನಡೆಸಲು , ಆಸ್ಪತ್ರೆಗಳಲ್ಲಿ ಸೌಲಭ್ಯಗಳು, ಆರೈಕೆ ಕೇಂದ್ರಗಳು (ಕ್ವಾರಂಟೈನ್ಡ್)  ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಲು ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ಧನ ಸಹಾಯವನ್ನು ಪ್ರಕಟಿಸಬೇಕು.

ಜನಧನ್ ಖಾತೆ ಮತ್ತು ಬಿಪಿಎಲ್ ಫಲಾನುಭವಿಗಳಿಗೆ 5 ಸಾವಿರ ರೂಪಾಯಿ ನಗದು ವರ್ಗಾವಣೆ ಮಾಡಬೇಕು.

ಎಲ್ಲ ಬಿಪಿಎಲ್‌ ಹಾಗೂ ಎಪಿಎಲ್ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒಂದು ತಿಂಗಳ ಉಚಿತ ರೇಶನ್‌ ವಿತರಿಸಬೇಕು.  ಇದಕ್ಕೆ ಎಫ್‌ಸಿಐ ಗೋದಾಮುಗಳಲ್ಲಿರುವ 7.5 ಕೋಟಿ ಟನ್‌ಗಳ ಅಗಾಧ ದಾಸ್ತಾನನ್ನು ಬಳಸಬೇಕು.
ಎಲ್ಲ ಅಗತ್ಯ ಸರಕುಗಳನ್ನು ಒಳಗೊಳ್ಳುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು. ಶಾಲೆಗಳಲ್ಲಿ ಮಧ್ಯಾಹ್ನದ ಉಟದ ಯೋಜನೆಯ ಬದಲು, ರೇಶನ್ ಕಿಟ್‌ಗಳನ್ನು ಮಕ್ಕಳ ಮನೆಗಳಿಗೆ/ ಕುಟುಂಬಗಳಿಗೆ ಒದಗಿಸಬೇಕು.

 ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಲ್ಲಿ ಜೀವನಾಧಾರಗಳಿಗೆ ತೊಂದರೆಯಾಗಿರುವ ಎಲ್ಲ ಕಾರ್ಮಿಕರಿಗೆ ಹಣಕಾಸು ನೆರವು/ಭತ್ಯೆಯನ್ನು ನೀಡಲು ಒಂದು ನಿಧಿಯನ್ನು ಸ್ಥಾಪಿಸಬೇಕು.

 ಕೊರೊನ ವೈರಸ್‌ನಿಂದಾಗಿ ಕೆಲಸದಿಂದ ದೂರವಿರಬೇಕಾದ ಕಾರ್ಮಿಕರು ಮತ್ತು ನೌಕರರಿಗೆ ಸಂಬಳ ಸಹಿತ ಕಾಯಿಲೆ ರಜಾ ನೀಡಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಬ್ಯಾಂಕು ಸಾಲಗಳ ಮರುಪಾವತಿಯಲ್ಲಿ ಒಂದು ವರ್ಷದ ಋಣ ವಿಳಂಬದ ಸೌಲಭ್ಯವನ್ನು ನೀಡಬೇಕು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ ಕೈ ತೊಳೆಯುವ ಕೆಂದ್ರಗಳನ್ನು ಸ್ಥಾಪಿಸಲು ಸ್ಥಳಿಯಾಡಳಿತಗಳು ಕ್ರಮಕೈಗೊಳ್ಳಬೇಕು ಎಂದು ಡಿ ವೈ ಎಫ್ ಐ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ  ಸುರೇಂದ್ರ ಕೋಟ್ಯಾನ್ ಬಂಟ್ವಾಳ ಹಾಗೂ ಕಾರ್ಯದರ್ಶಿ ತುಳಸೀದಾಸ್ ವಿಟ್ಲ  ಅವರು ನೀಡಿರುವ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನ ವೈರಸ್ ವಿರುದ್ಧ ಕೇರಳ ಮಾದರಿಯಲ್ಲಿ ಕ್ರಮಕೈಗೊಳ್ಳಲು ಡಿ.ವೈ.ಎಫ್.ಐ ಆಗ್ರಹ Rating: 5 Reviewed By: karavali Times
Scroll to Top