ಮಂಗಳೂರು (ಕರಾವಳಿ ಟೈಮ್ಸ್) : ಪ್ರಾದೇಶಿಕ ಮತ್ತು ಅಂತರ್‍ರಾಜ್ಯ ಪ್ರಯಾಣ ಸೇವೆಯಲ್ಲಿ ಸುಮಾರು ಏಳು ದಶಕಗಳ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡು ಪ್ರವಾಸಿಗರ ಸಂಚಾರಕ್ಕೆ ಹೆಸರುಗಳಿಸಿರುವ ಕೆನರಾ ಪಿಂಟೋ ಟ್ರಾವೆಲ್ಸ್ ಇದೀಗ ಅತ್ಯಾಧುನಿಕ ದ ಸ್ಟಾರ್ಝ್ ಪ್ರೀಮಿಯಂ ವೊಲ್ವೋ ಬಿ11ಆರ್-14.95 ಮೀಟರ್ ಮಲ್ಟಿ ಎಕ್ಸೆಲ್ ಸ್ಲೀಪರ್ ಎಸಿಐ-ಶಿಫ್ಟ್ ಪ್ರತ್ಯೇಕ ಎಲ್‍ಸಿಡಿಗಳುಳ್ಳ 42-ಸ್ಲೀಪರ್ ಬರ್ತ್ ಐಷಾರಾಮಿ ಬಸ್‍ಗಳನ್ನು ಪ್ರಯಾಣಿಕರ ಸೇವೆಗೆ ಸಿದ್ಧಪಡಿಸಿದೆ. ಮಂಗಳೂರು-ಮುಂಬಯಿ-ಮಂಗಳೂರು ಮಾರ್ಗವಾಗಿ ಈ ನೂತನ ಐಷಾರಾಮಿ ಬಸ್‍ಗಳು ಸೇವೆಗೆ ಸಜ್ಜಾಗಿದ್ದು ಈಗಾಗಲೇ ಮಂಗಳೂರುನಿಂದ ಮೊದಲ ಸಂಚಾರ ಆರಂಭಿಸಿದೆ.
ಕಳೆದ ಸುಮಾರು ಏಳು ದಶಕಗಳಿಂದ ಪ್ರಯಾಣಿಕರ ವಿಶ್ವಾಸಾರ್ಹ ಸೇವೆಯಲ್ಲಿ ಕೆನರಾ ಪಿಂಟೊ ಟ್ರಾವೆಲ್ಸ್ ಸಂಸ್ಥೆ ಪ್ರಯಾಣಿಕರ ಭರವಸೆಗೆ ಪಾತ್ರವಾಗಿದ್ದು ಇದೀಗ ಗ್ರಾಹಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ಮಿಲಾಗ್ರಿಸ್ ನಿಂದ ಪ್ರತಿ ದಿನ ಅಪರಾಹ್ನ 1.45 ಗಂಟೆಗೆ ಪ್ರಯಾಣ ಬೆಳೆಸಿ ಉಡುಪಿ, ಕುಂದಾಪುರ, ಭಟ್ಕಳ, ಬೆಳಗಾಂ ಮಾರ್ಗವಾಗಿ ಪುಣೆ, ಚೆಂಬೂರು, ಸಯಾನ್, ಅಂಧೇರಿ, ಬೋರಿವಿಲಿ, ದಹಿಸರ್ ಮಾರ್ಗವಾಗಿ ವಿೂರಾ ರೋಡ್ (ಸೀತಲ್‍ನಗರ್) ಸೇರಲಿದೆ. ಅಂತೆಯೇ ಪ್ರತಿದಿನ ಮಧ್ಯಾಹ್ನ 12.15 ಗಂಟೆಗೆ ವಿೂರಾರೋಡ್ ನಿಂದ (ಸೀತಲ್‍ನಗರ್) ಹೊರಟು ಅದೇ ಮಾರ್ಗವಾಗಿ ಮಂಗಳೂರು ಸೇರಲಿದೆ.
ನೂತನ ಬಸ್ಸುಗಳು ಇದೀಗಲೇ ಸೇವೆಯಲ್ಲಿ ಲಭ್ಯವಿದ್ದು ಅತ್ಯಾಧುನಿಕ ಈ ಬಸ್ಸುಗಳು ಎಂದಿನಂತೆಯೇ ಪ್ರಯಾಣಿಕರ ಸೇವೆಯಲ್ಲಿವೆ. ಕೆನರಾ ಪಿಂಟೊ ದೈನಂದಿನ ಸರ್ವಿಸ್‍ಗಳು ನಿಮ್ಮ ಸೇವೆಯಲ್ಲಿದ್ದು ಟಿಕೇಟು ಬುಕ್ಕಿಂಗ್‍ಗಾಗಿ ತಮ್ಮ ಸಮೀಪದ ಬಸ್ ಏಜೆಂಟರನ್ನು ಅಥವಾ ಮಂಗಳೂರು ಯಾ ಮುಂಬಯಿ ಇಲ್ಲಿನ ಕೆನರಾ ಪಿಂಟೊ ಕಛೇರಿಗಳನ್ನು ಸಂಪರ್ಕಿಸುವಂತೆ ಅಥವಾ WWW.ಅಂಓಂಖಂPIಓಖಿಔ.ಅಔಒ ಇದಕ್ಕೆ ಲಾಗಿನ್ ಮಾಡಿ ತಮಗೆ ಅನುಕೂಲಕರವಾದ ಸೀಟುಗಳನ್ನು ಕಾಯ್ದಿರಿಸಿ ಸುಖಕರ ಪ್ರಯಾಣ ನಡೆಸುವಂತೆ ಕೆನರಾ ಪಿಂಟೊ ಸಂಸ್ಥೆಯ ಮಾಲೀಕ ಸುನೀಲ್ ಪಾಯ್ಸ್ ತಿಳಿಸಿದ್ದಾರೆ.
0 comments:
Post a Comment