ಬೆಂಗಳೂರಿಗೆ ಬರಲು, ಬೆಂಗಳೂರಿಂದ ತೆರಳಲು ಇಂದು ರಾತ್ರಿ ಡೆಡ್ ಲೈನ್ : ಸಿಎಂ ಯಡಿಯೂರಪ್ಪ - Karavali Times ಬೆಂಗಳೂರಿಗೆ ಬರಲು, ಬೆಂಗಳೂರಿಂದ ತೆರಳಲು ಇಂದು ರಾತ್ರಿ ಡೆಡ್ ಲೈನ್ : ಸಿಎಂ ಯಡಿಯೂರಪ್ಪ - Karavali Times

728x90

24 March 2020

ಬೆಂಗಳೂರಿಗೆ ಬರಲು, ಬೆಂಗಳೂರಿಂದ ತೆರಳಲು ಇಂದು ರಾತ್ರಿ ಡೆಡ್ ಲೈನ್ : ಸಿಎಂ ಯಡಿಯೂರಪ್ಪ


ನಾಳೆಯಿಂದ ಮತ್ತಷ್ಟು ಕಠಿಣ ನಿರ್ಬಂಧ ಜಾರಿ


ಬೆಂಗಳೂರು (ಕರಾವಳಿ ಟೈಮ್ಸ್) : ಇಂದು ಕಫ್ರ್ಯೂ ವಿಧಿಸಿ ಮನೆಯಲ್ಲೇ ಇರಬೇಕು ಎಂದರೂ ಬಹಳಷ್ಟು ಜನ  ಹೊರಗಡೆ ಓಡಾಡುತ್ತಿದ್ದಾರೆ. ಹೀಗಾಗಿ ಇಂದು ಬೆಂಗಳೂರಿನಿಂದ ಹೊರಗೆ ಹೋಗುವವರು ಹೋಗಬಹುದು. ಅದೇ ರೀತಿ ಬೆಂಗಳೂರಿಗೆ ಹೊರಗಿಂದ ಬರುವವರು ಬರಬಹುದು. ಇಂದು ರಾತ್ರಿಯೊಳಗೆ ಮಾತ್ರ ಬರೋರಿಗೆ ಹೋಗೋರಿಗೆ ಅವಕಾಶ ಎಂದು ಸಿಎಂ ಯಡಿಯೂರಪ್ಪ ಗಡುವು ಕೊಟ್ಟಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ದೇಶದಲ್ಲೇ ಮೊದಲ ಬಾರಿಗೆ 24*7 ವಾರ್ ರೂಂ ಮಾಡಿ, ಕೋವಿಡ್ ಸೋಂಕಿಂದ ನರಳುವವರ ಮಾಹಿತಿಯನ್ನು ಇಲ್ಲಿ ಪಡೆಯುತ್ತೀವಿ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದಾಖಲಾಗಿರುವ, ಸೋಂಕು ಬರೋರ ಮೇಲೆ ಇಲ್ಲಿಂದಲೇ ನಿಗಾ ಇಡಬಹುದು. ಭಾರತ ಸರ್ಕಾರ ನೀಡಿರುವ ಸಲಹೆಯಂತೆ ಕರ್ನಾಟಕ ರಾಜ್ಯಾದ್ಯಂತ ಅಂತರಾಷ್ಟ್ರೀಯ ಪ್ರಯಾಣಿಕರ ತಪಾಸಣೆಯನ್ನು ಕೈಗೊಳ್ಳಲಾಗಿದೆ. ಇಂದಿನವರೆಗೆ 1,27,609 ಪ್ರಯಾಣಿಕರನ್ನು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ಮತ್ತು ಕಾರವಾರ ಬಂದರಿನಲ್ಲಿ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದರು.

ವಿದೇಶದಿಂದ ಬಂದ 12,029 ಪ್ರಯಾಣಿಕರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. 173 ಜನರನ್ನು ಪ್ರತ್ಯೇಕವಾಗಿ ಐಸೋಲೇಷನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. 1770 ಪರೀಕ್ಷಾ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 1173 ನೆಗೆಟಿವ್ ಪ್ರಕರಣ ಬಂದಿದೆ. ಇಲ್ಲಿಯವರೆಗೆ 38 ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿರ್ಬಂಧ ಹೇರಲಾಗಿದೆ. ಈ ಹಿಂದೆಯೇ ಎಲ್ಲ ಶೈಕ್ಷಣಿಕ ಕಚೇರಿಗಳನ್ನು ಮುಚ್ಚಲಾಗಿದ್ದು, ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಉಳಿದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಡಿತಗೊಳಿಸಲಾಗಿದೆ ಎಂದರು.

ತುರ್ತು ಪರಿಸ್ಥಿತಿ ಹೊರತು ಪಡಿಸಿ ರಾಜ್ಯ ಗಡಿಭಾಗಗಳನ್ನು ಮುಚ್ಚಲಾಗಿದೆ. ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಉಪಮುಖ್ಯಮಂತ್ರಿ ಮತ್ತು ಇಬ್ಬರು ಸಚಿವರನ್ನು ಒಳಗೊಂಡ ಟಾಸ್ಕ್‍ಫೆÇೀರ್ಸ್ ರಚನೆ ಮಾಡಲಾಗಿದೆ. ವೈದ್ಯರು, ಖಾಸಗಿ ವೈದ್ಯರ ಜೊತೆ ಚರ್ಚೆ ನಡೆಸಿದ್ದೇನೆ. ಅವರಿಂದ ಪ್ರತಿದಿನ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ವಿದೇಶದಿಂದ ಬರುವವರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಕ್ರಮ ತೆಗೆದುಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ. ಇದಕ್ಕಾಗಿ ಬೆಂಗಳೂರು ಸೇರಿದಂತೆ ಇತರೆ ಕಡೆ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ನಾಳೆ ಯುಗಾದಿ ಹಬ್ಬ. ಈ ಹಬ್ಬವನ್ನು ಬಹಳ ಸರಳವಾಗಿ ಆಚರಿಸಬೇಕು. ಯಾರೂ ಸಹ ಹೊರಗೆ ಬರದೇ ಎಚ್ಚರವಹಿಸಬೇಕಿರುವುದು ಅತ್ಯಂತ ಅಗತ್ಯವಿದೆ. ಇಂದು ಕರ್ಫ್ಯೂ ಇರಬೇಕು ಎಂದು ಹೇಳಿದರೂ ಬಹಳಷ್ಟು ಜನರು ಮನೆಯಿಂದ ಹೊರಗಡೆ ಓಡಾಡುತ್ತಿದ್ದಾರೆ. ಹೀಗಾಗಿ ಇವತ್ತು ಬೆಂಗಳೂರಿನಿಂದ ಹೊರಗೆ ಹೋಗುವವರು ಹೋಗಬಹುದು. ಅದೇ ರೀತಿ ಬೆಂಗಳೂರಿಗೆ ಹೊರಗಿಂದ ಬರುವವರು ಬರಬಹುದು. ಇವತ್ತು ರಾತ್ರಿಯೊಳಗೆ ಮಾತ್ರ ಬರೋರಿಗೆ ಹೋಗೋರಿಗೆ ಅವಕಾಶ. ನಾಳೆಯಿಂದ ತುಂಬಾ ಬಿಗಿಯಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಲೇಬೇಕು ಎಂದು ಸಿಎಂ ಎಚ್ಚರಿಕೆ ನೀಡಿದರು.

ಸರ್ಕಾರದಿಂದ ಏನೇನೂ ಮಾಡಬೇಕೋ ಎಲ್ಲವನ್ನು ಮಾಡುತ್ತಿದೆ. ಆದರೆ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಮಾರ್ಚ್ 31ರವರೆಗೂ ಮನೆಯಲ್ಲಿ ಇದ್ದು, ಕೋವಿಡ್ ಹರಡದಂತೆ ನೋಡಿಕೊಳ್ಳಬೇಕು. ಜನರು ಸಹಕಾರ ಕೊಟ್ಟರೆ ಮಾತ್ರ ಇದನ್ನು ಹರಡದಂತೆ ನೋಡಿಕೊಳ್ಳಬಹುದು. ಇಡೀ ದೇಶದಲ್ಲಿ ನಾವು 3ನೇ ಹಂತದಲ್ಲಿ ಇದ್ದೇವೆ. ಹೀಗಾಗಿ ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡರು.
  • Blogger Comments
  • Facebook Comments

1 comments:

  1. Dear sir I like your correct disision. I am supporting your decision. I am also following the necessary rules. Thank you

    ReplyDelete

Item Reviewed: ಬೆಂಗಳೂರಿಗೆ ಬರಲು, ಬೆಂಗಳೂರಿಂದ ತೆರಳಲು ಇಂದು ರಾತ್ರಿ ಡೆಡ್ ಲೈನ್ : ಸಿಎಂ ಯಡಿಯೂರಪ್ಪ Rating: 5 Reviewed By: karavali Times
Scroll to Top