ಬೇಬಿ ಕುಂದರ್ |
ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ಮಾರಕ ವೈರಸ್ ತನ್ನ ಕಬಂಧಬಾಹು ಜಗತ್ತಿನಾದ್ಯಂತ ವಿಸ್ತರಿಸುತ್ತಿರುವ ಹಿನ್ನಲೆಯಲ್ಲಿ ಜನ ತನ್ನ ಸ್ವತಃ ರಕ್ಷಣೆಯ ಜೊತೆಗೆ ತನ್ನವರ ಹಾಗೂ ರಾಜ್ಯದ, ದೇಶದ ಜನರ ಹಿತಕ್ಕಾಗಿ ನಾವು ತ್ಯಾಗ ಮನೋಭಾವದಿಂದ ಎಲ್ಲಾ ರೀತಿಯ ಸಹಕಾರವನ್ನು ಸರಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ನೀಡಬೇಕಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮನವಿ ಮಾಡಿಕೊಂಡಿದ್ದಾರೆ.
ಕರೋನದಂತಹ ಮಾರಕ ರೋಗಗಳು ಭಗವಂತನ ಕಠಿಣ ಪರೀಕ್ಷಾ ರೂಪದಲ್ಲಿ ಅವರ ಸೃಷ್ಟಿಗಳ ಮೇಲೆರಗಿದ್ದು, ಜಾತಿ-ಮತ ವರ್ಗಗಳ ಆಧಾರದಲ್ಲಿ ಮಾನವೀಯತೆ ಮರೆತು ಪರಸ್ಪರ ಕಚ್ಚಾಟ ನಡೆಸುತ್ತಿದ್ದ ಮಾನವನಿಗೆ ಇಂತಹ ಸಂದರ್ಭಗಳು ಸಕಾಲಿಕ ಪಾಠವನ್ನು ಕಲಿಸಿದ್ದು ಇನ್ನಾದರೂ ಈ ಲೋಕದಲ್ಲಿ ಮಾನವೀಯತೆ, ಮನುಷ್ಯತ್ವ ಬಿಟ್ಟು ಉಳಿದವುಗಳೆಲ್ಲವೂ ನಗಣ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶ ಸರಕಾರ ರಚನೆ ಹಾಗೂ ಆಪರೇಶನ್ ಕಮಲದ ಬಗ್ಗೆ ಪ್ರತಿಕ್ರಯಿಸಿದ ಬೇಬಿ ಕುಂದರ್ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಜನರನ್ನು ವಂಚಿಸುವ ಮೂಲಕ ಬಿಜೆಪಿ ಪಕ್ಷದ ನಾಯಕರು ಅಧಿಕಾರ, ಅಂತಸ್ತು ಇವುಗಳ ಮುಂದೆ ನಮಗೆ ಯಾವುದೂ ಬೇಕಾಗಿಲ್ಲ ಎಂಬ ತೀರಾ ಕೆಳಮಟ್ಟದ ಮನೋಭಾವವನ್ನು ಪ್ರದರ್ಶಿಸಿರುವುದು ಅತ್ಯಂತ ಖಂಡನೀಯ ಎಂದು ಕಿಡಿ ಕಾರಿದ್ದಾರೆ.
0 comments:
Post a Comment